ಬಂಟ್ವಾಳ: ತಾಲೂಕು ಮಟ್ಟದಲ್ಲಿ ಸರಕಾರದ ವತಿಯಿಂದ ಗೋ ಶಾಲೆ ನಿರ್ಮಾಣ ಮಾಡುವಂತೆ ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಲ್ಲಡ್ಕ ವಲಯದ ವತಿಯಿಂದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಯವರಿಗೇ ಮನವಿ ಸಲ್ಲಿಸಿದರು.
ಬಂಟ್ವಾಳ ತಾಲೂಕು ಮಟ್ಟದಲ್ಲಿ ಸರಿಯಾದ ಗೋ ಶಾಲೆ ಇಲ್ಲದೇ ಗೋರಕ್ಷಣೆಯ ಬಗ್ಗೆ ತುಂಬಾ ಸಮಸ್ಯೆಯಾಗಿದೆ. ಈ ನಿಟ್ಟಿನಲ್ಲಿ ಸರಕಾರದ ವತಿಯಿಂದ ಸೂಕ್ತವಾದ ಸ್ಥಳದಲ್ಲಿ ಗೋ ಶಾಲೆಯನ್ನು ನಿರ್ಮಿಸಿದಲ್ಲಿ ತುಂಬಾ ಅನುಕೂಲವಾಗುವುದು. ಬಂಟ್ವಾಳ ತಾಲೂಕಿನ ಸೂಕ್ತ ಜಾಗದಲ್ಲಿ ಸರಕಾರಿ ಜಮೀನನ್ನು ಗೋ ಶಾಲೆಗೆ ಮಂಜೂರು ಮಾಡಿಸಿ, ಅಲ್ಲಿ ಸರಕಾರದ ವತಿಯಿಂದ ಗೋ ಶಾಲೆಯನ್ನು ನಿರ್ಮಿಸುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಶಿಫಾರಸ್ಸು ಮಾಡುವಂತೆ ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿಗಾರ್ ಕಲ್ಲಡ್ಕ ,ಕಾರ್ಯದರ್ಶಿ ನವೀನ್ ಕಲ್ಲಡ್ಕ, ಸಂಚಾಲಕ ಮೋಹನ್ ದಾಸ್ ಕಲ್ಲಡ್ಕ, ಸುರಕ್ಷಾ ಪ್ರಮುಖ್ ಶ್ರೀಕಾಂತ್ ಕಲ್ಲಡ್ಕ ಉಪಸ್ಥಿತರಿದ್ದರು.