ಪುತ್ತೂರು: ಕೆರೆಮೂಲೆ ನಿವಾಸಿ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತ ವಾಲ್ಟರ್ ರವರು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷಕ್ಕೆ ಎಸ್.ಡಿ.ಪಿ.ಐ ಪುತ್ತೂರು ವಿಧಾನ ಸಭಾ ಕ್ಷೇತ್ರ ಅಧ್ಯಕ್ಷರಾದ ಸಿದ್ದೀಕ್ ಪುತ್ತೂರು ಇವರ ಸಮ್ಮುಖದಲ್ಲಿ ಸೇರ್ಪಡೆಗೊಂಡರು. ಇವರನ್ನು ಪುತ್ತೂರು ನಗರ ಅಧ್ಯಕ್ಷರಾದ ಸಿರಾಜ್ ಎ ಕೆ ಪಕ್ಷದ ಧ್ವಜವನ್ನು ನೀಡುವ ಮೂಲಕ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ವಿಧಾನ ಸಭಾ ಕೇತ್ರ ಸಮಿತಿ ಸದಸ್ಯ ಅಬ್ದುಲ್ ಹಮೀದ್ ಸಾಲ್ಮರ, ನಗರ ಸಮಿತಿ ಜತೆ ಕಾರ್ಯದರ್ಶಿ ಲತೀಪ್ ಸಾಲ್ಮರ, ಎಸ್.ಡಿ.ಪಿ.ಐ ಸಾಲ್ಮರ ವಾರ್ಡ್ ಸಮಿತಿ ಅಧ್ಯಕ್ಷ ನವಾಝ್ ಪಿ ಎಸ್, ಕಾರ್ಯದರ್ಶಿ ಅನ್ಸಾರ್ ಸೈಯ್ಯದ್ ಮಲೆ, ಕೆರೆಮೂಲೆ ಬೂತ್ ಅಧ್ಯಕ್ಷ ರಝಾಕ್ ಜನತಾ, ಕಾರ್ಯದರ್ಶಿ ಮುಸ್ತಪ ಕೆರೆಮೂಲೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.