ಪುತ್ತೂರು : ಕಳೆದ 19 ವರ್ಷಗಳಿಂದ 20 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಗಾಯನ ಕ್ಷೇತ್ರದಲ್ಲಿ ಪಳಗಿಸಿರುವ ಮತ್ತು ತನ್ನದೇ ಆದ ವಿಭಿನ್ನ ಮತ್ತು ವಿನೂತನ ಶೈಲಿಯ ಸಂಗೀತ ಕಾರ್ಯಕ್ರಮಗಳ ಸಂಘಟನೆಯ ಮೂಲಕ ಹೆಸರುವಾಸಿಯಾಗಿರುವ ಸಂಗೀತ ಸಂಸ್ಥೆ ಗಾನಸಿರಿ ಕಲಾ ಕೇಂದ್ರ ಪುತ್ತೂರು ಇದರ ನೂತನ ಶಾಖೆಯ ಶುಭಾರಂಭ ಕಾರ್ಯಕ್ರಮವು ಜ. 3ರಂದು ಸಾಯಂಕಾಲ 5 ಗಂಟೆಗೆ ಕುಂಬ್ರದ ಮಂದಾರ ಸಂಕೀರ್ಣದಲ್ಲಿ ನಡೆಯಲಿದೆ.
ಸುಂದರ್ ರೈ ಮಂದಾರ ಇವರು ನೂತನ ಸಂಸ್ಥೆಯ ಶುಭಾರಂಭಕ್ಕೆ ಚಾಲನೆ ನೀಡಲಿದ್ದು, ಗಾಯಕರೂ ಹಾಗೂ ಸಂಗೀತ ಗುರುಗಳಾದ ಡಾ. ಕಿರಣ್ ಕುಮಾರ್ ಇವರಲ್ಲಿ ಸಂಗೀತ ತರಬೇತಿ ಪಡೆದ ನೂರಾರು ವಿದ್ಯಾರ್ಥಿಗಳು ಇಂದು ಸಾಧನೆ ಗೈದಿದ್ದು, ಇದೀಗ ವಾರದಲ್ಲಿ ಎರಡು ದಿನ ಡಾ. ಕಿರಣ್ ಕುಮಾರ್, ಗಾಯಕಿ ಶ್ರೀ ಲಕ್ಷ್ಮಿ ಎಸ್ ಪುತ್ತೂರು ಮತ್ತು ಗಾನಸಿರಿಯ ನುರಿತ ತರಬೇತುದಾರರಿಂದ ಸುಗಮ ಸಂಗೀತ, ಮಧುರ ಚಲನಚಿತ್ರ ಗೀತೆ, ಭಾರತೀಯ ಶೈಲಿಯ ಕೀಬೋರ್ಡ್ ತರಗತಿ, ಡ್ರಾಯಿಂಗ್ ತರಗತಿಗಳು ನಡೆಯಲಿದೆ. ಆಸಕ್ತರು ಉದ್ಘಾಟನಾ ಸಂದರ್ಭದಲ್ಲಿ ಹಾಜರಿದ್ದು ಹೆಚ್ಚಿನ ಮಾಹಿತಿಗೆ 9901555893 ಸಂಖ್ಯೆಗೆ ಕರೆ ಮಾಡಬಹುದು ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.