ಅಡಿಕೆ ಧಾರಣೆಯಲ್ಲಿ ಮತ್ತೆ ಏರಿಕೆ ಕಂಡಿದೆ. ಹೊರಮಾರುಕಟ್ಟೆಯಲ್ಲಿ ಚಾಲಿ ಹೊಸ ಅಡಿಕೆಯ ಬೆಲೆ 475 ಇದೆ.ಕ್ಯಾಂಪೋದಲ್ಲಿ ಮಂಗಳೂರು ಚಾಲಿ ಹೊಸ ಮತ್ತು ಹಳೆ ಅಡಿಕೆಯ ಧಾರಣೆ ಸ್ಥಿರತೆ ಕಂಡಿದೆ.
ಕ್ಯಾಂಪ್ಕೋದಲ್ಲಿ ಹೊಸ ಅಡಿಕೆಯ ಧಾರಣೆ ಕೆ.ಜಿ.ಗೆ ರೂ. 470, ಹಳೆ ಅಡಿಕೆಯ ಧಾರಣೆ ಕೆ.ಜಿ.ಗೆ ರೂ. 505ರಷ್ಟು ಇದೆ.
ಮಾರುಕಟ್ಟೆಯಲ್ಲಿ ಹೊಸ ಅಡಿಕೆಗೆ ಬೇಡಿಕೆ ಇದೆ. ಚಾಲಿ ಹಳೆ ಅಡಿಕೆಯ ಮಾರುಕಟ್ಟೆ ಹಿನ್ನೆಡೆ ಕಂಡಿದೆ. ಕ್ಯಾಂಪ್ಕೋ ಹಳೆ ಅಡಿಕೆಯ ಮಾರುಕಟ್ಟೆಯಲ್ಲಿ ಧಾರಣೆ ಸ್ಥಿರತೆಯನ್ನು ಕಾಯ್ದುಕೊಂಡ ಕಾರಣ ಹಳೆ ಅಡಿಕೆಯ ಧಾರಣೆ ಕುಸಿದಿಲ್ಲ. ಹೊರ ಮಾರುಕಟ್ಟೆಯಲ್ಲಿ ಸೋಮವಾರ ಹೊಸ ಅಡಿಕೆಯ ಧಾರಣೆ ಕೆ.ಜಿ.ಗೆ ರೂ. 475 ತಲುಪಿದರೂ ಆವಕದ ಪ್ರಮಾಣ ಕಡಿಮೆ ಇತ್ತು.
ಕ್ಯಾಂಪ್ಕೋದಲ್ಲಿ ಸೆ.7ರಂದು ಹೊಸ ಅಡಿಕೆಗೆ 410 – 470,ಹಳೆ ಅಡಿಕೆಗೆ 480 – 505,ಡಬಲ್ ಚೋಲ್ 480 – 505,ಫಟೋರ 280 ರಿಂದ 385,ಉಳ್ಳಿಗಡ್ಡೆ 150 ರಿಂದ 300,ಕರಿಗೋಟು ಬೆಲೆ 220 ರಿಂದ 310 ಇತ್ತು.ಹೊರ ಮಾರುಕಟ್ಟೆಯಲ್ಲಿ ಹೆಚ್ಚಳ ಇತ್ತು. ಗಣೇಶ ಚತುರ್ಥಿ ಹಬ್ಬದ ಬಳಿಕ ಅಡಿಕೆಯ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.