ಸವಣೂರು: ಕೆಮ್ಮಿಸ್ಟ್ಸ್ ಡ್ರಗ್ಗಿಸ್ಟ್ಸ್, ಆಯುರ್ವೇದಿಕ್, ವೆಟಿನರಿ ಮೆಡಿಕಲ್ ಸಂಬಂಧೀ ಉತ್ಪನ್ನಗಳ ಮಳಿಗೆ ‘ಲೈಫ್ ಕೇರ್ ಮೆಡಿಕಲ್ಸ್’ ಸವಣೂರಿನ ಸಹಲ್ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು.

ಬೆಳ್ಳಾರೆ ಆರಕ್ಷಕ ಠಾಣೆಯ ಠಾಣಾಧಿಕಾರಿ ಆಂಜನೇಯ ರೆಡ್ಡಿ ಉದ್ಘಾಟಿಸಿದರು. ಮುದರ್ರಿಸ್ ಬಿ ಜೆ ಎಂ ಚಾಪಳ್ಳ ಬಹು ಅಲ್ ಹಾಜ್ ಮುಹಮ್ಮದ್ ಅಶ್ರಫ್ ಬಾಖವಿ ದುವಾ ಆಶೀರ್ವಚನ ನೆರವೇರಿಸಿದರು. ಯು ಎ ಇ ಉದ್ಯಮಿ ಅಶ್ರಫ್ ಷಾ ಮಾಂತೂರು ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕ ಕೆ ಸೀತಾರಾಮ ರೈ, ಎಪಿಎಂಸಿ ಪುತ್ತೂರು ಅಧ್ಯಕ್ಷ ದಿನೇಶ್ ಮೆದು, ಸವಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ರಜೀವಿ ಶೆಟ್ಟಿ, ಬೆಂಗಳೂರಿನ ಉದ್ಯಮಿ ಜ ಇಕ್ಬಾಲ್ ಕರ್ವೇಲು, ಎಂಬಿಎಂ ಗ್ರೂಪ್ ಉಳ್ಳಾಲ ಫೌಂಡರ್ ಜ ಮನ್ಸೂರ್ ಅಹ್ಮದ್, ಡಾ. ಸುಬ್ರಹ್ಮಣ್ಯ ಭಟ್ ಸವಣೂರು, ಡಾ. ಶ್ಯಾಮ್ ಸುಂದರ್ ಸವಣೂರು, ಡಾ. ಝರೀನಾ ಫಾತಿಮ ಸವಣೂರು, ಡಾ. ಚೈತ್ರರಶ್ಮಿ ಎ ರೈ ಸವಣೂರು, ಗ್ರಾಮ ಪಂಚಾಯಿತಿ ಸವಣೂರು ಸದಸ್ಯ ರಝಾಕ್ ಕೆನರಾ, ರಫೀಕ್ ಎಂ ಎ, ಸಹಲ್ ಕಾಂಪ್ಲೆಕ್ಸ್ ಸವಣೂರು ಮಾಲಕ ಆಬ್ದುಲ್ ಖಾದರ್ ಹಾಜಿ.

ವರ್ತಕರ ಸಂಘ ಸವಣೂರು ಅಧ್ಯಕ್ಷ ರಫೀಕ್ ಹಾಜಿ ಅರ್ತಿಕೆರೆ, ಎಸ್ ವೈ ಎಸ್ ಸವಣೂರು ಅಧ್ಯಕ್ಷ ಬಹು ಹನೀಫ್ ಸ ಅದಿ, ರಹ್ಮಾನಿಯಾ ಜುಮಾ ಮಸ್ಜಿದ್ ಪಣೆಮಜಲು ಉಪಾಧ್ಯಕ್ಷ ಇಸ್ಮಾಯಿಲ್ ಟಾಸ್ಕೋ, ಬಹು ಯಾಕೂಬ್ ದಾರಿಮಿ ಸೋಂಪಾಡಿ, ಉಮ್ಮರ್ ನೇರಳಕಟ್ಟೆ, ನಝೀರ್ ಸಿ ಪಿ, ಮಾಲಕ ಶರೀಫ್ ಚಾಪಳ್ಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.
