ವಿಟ್ಲ: ಸಂಗಮ ಯುವಕ ಮಂಡಲ ಪಡಿಬಾಗಿಲು ಇದರ ವತಿಯಿಂದ ಗೌರಿ ಗಣೇಶ ಹಬ್ಬದ ಪ್ರಯುಕ್ತ, ಮೊಸರು ಕುಡಿಕೆ ಅಂಗವಾಗಿ, ಕೊರೊನಾ ರೋಗ ದೇಶದಿಂದ ಶೀಘ್ರವಾಗಿ ಮುಕ್ತವಾಗಲು ಗಣಹೋಮವನ್ನು ಯುವಕ ಮಂಡಲದ ಕಟ್ಟಡದಲ್ಲಿ ನಡೆಸಲಾಯಿತು.

ದೀಪ ಪ್ರಜ್ವಲನೆಯನ್ನು ಕೇಪು ಗ್ರಾಮ ಪಂಚಾಯತ್ ಸದಸ್ಯ ಜಗಜ್ಜೀವನ್ ರಾಮ್ ಶೆಟ್ಟಿ ಯವರು ನೆರೆವೇರಿಸಿದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಗೋಪಾಲ ನಾಯ್ಕ್, ನಾರಾಯಣ ನಾಯ್ಕ್, ಸುರೇಶ್ ಶೆಟ್ಟಿ ಪಡಿಬಾಗಿಲು, ಐತಪ್ಪ ನಾಯ್ಕ್ ಪಡಿಬಾಗಿಲು, ಸುಧಾಕರ ಶೆಟ್ಟಿ ಬೇಂಗ್ರೋಡಿ, ಉದಯ ಕುಮಾರ್, ರವಿ ನಾಯ್ಕ್, ಬಾಬು ಮಾಸ್ಟರ್, ತಿಮ್ಮಪ್ಪ ಮಾಸ್ಟರ್, ರಾಮ ನಾಯ್ಕ್, ಕಿರಣ್, ರಘುನಾಥ ಮೈರ, ಕೃಷ್ಣ ನಾಯ್ಕ್, ರಘು ಪೂಜಾರಿ, ಹರೀಶ್ ಕೇಪು, ವಕೀಲರಾದ ಪದ್ಮನಾಭ ಅಳಿಕೆ, ಜೀವನ್, ಸನತ್, ಯಜ್ಞೆಶ್, ಉದಯ, ಅಮಿತಾ, ಜಯಲಕ್ಷ್ಮಿ ಅಳಿಕೆ, ಸಾಯಿ ಎಂಟರ್ ಪ್ರೈಸಸ್ ನ ಉದಯ್, ಕೇಶವ ಉಪಸ್ಥಿತರಿದ್ದರು.

