ಪುತ್ತೂರು: ಯುವಜನ ಹಾಗೂ ಕ್ರೀಡಾ ಇಲಾಖೆ, ಕೇಂದ್ರ ಸರ್ಕಾರ ನೆಹರು ಯುವ ಕೇಂದ್ರ ಸಂಘಟನ್ ಮಂಗಳೂರು, ಗ್ರಾಮ ಪಂಚಾಯಿತಿ ಪಂಜ ಹಾಗೂ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ (ರಿ )ಪಂಜ ಹಾಗೂ ಶ್ರೀ ಉಳ್ಳಾಕುಲು ಕಲಾ ರಂಗ ಪಲ್ಲೋಡಿ (ರಿ) ಮತ್ತು ಮಿತ್ರ ಮಂಡಲ ನಾಗತೀರ್ಥ (ರಿ) ಇದರ ಜಂಟಿ ಆಶ್ರಯದಲ್ಲಿ ‘ಅಜಾದಿ ಕ ಅಮೃತ್ ಮಹೋತ್ಸವ್ – ಪಿಟ್ ಇಂಡಿಯಾ ಫ್ರೀಡಂ ರನ್ -2.0’ ಕಾರ್ಯಕ್ರಮವನ್ನು ಪಂಜ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸೆ.10 ರಂದು ಆಚರಿಸಲಾಯಿತು.
ನೆಹರು ಯುವ ಕೇಂದ್ರದ ತಾಲೂಕು ಸಂಯೋಜಕರಾದ ಪ್ರತಿಭಾ ಕಾಯರ ಇವರು ಫಿಟ್ ಇಂಡಿಯ ರನ್ ಇದರ ಮಹತ್ವ ಹಾಗೂ ಪ್ರತಿಜ್ಞಾ ವಿಧಿಯನ್ನು ನೆರೆದವರಿಗೆ ಬೋಧಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪೂರ್ಣಿಮ ದೇರಾಜೆ ಅವರು ಅಜಾದಿ ಕಾ ಅಮೃತ್ ಮಹೋತ್ಸವ್ ಕಾರ್ಯಕ್ರಮದ ಧ್ಯೇಯ ಹಾಗೂ ಮಹತ್ವ ಹಾಗೂ ಯುವಜನತೆಯು ಹೇಗೆ ತಮ್ಮನ್ನು ಫಿಟ್ ಇಂಡಿಯ ಫ್ರೀಡಂ ರನ್ ಲಿ ತೊಡಗಿಸಿಕೊಳ್ಳಬೇಕು ಎಂಬ ಹಿತ ನುಡಿದರು. ಸಂದೀಪ್ ಪಲ್ಲೋಡಿ ಅವರು ಪ್ರಸ್ತಾವಿಕ ಮಾತುಗಳನ್ನಾಡಿ, ಯುವಜನತೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಕ್ರೀಡಾ ಚಟುವಟಿಕೆಯ ಅಗತ್ಯವನ್ನು ತಿಳಿಯ ಪಡಿಸಿದರು.
ಕಾರ್ಯಕ್ರಮವನ್ನು ವರ್ಷಿತ್ ಪಂಜ ಸ್ವಾಗತಿಸಿ, ಹಿತೇಶ್ ಪಂಜದಬೈಲು ವಂದಿಸಿದರು. ಚೇತನ್ ಜಳಕದ ಹೊಳೆ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪೂರ್ಣಿಮಾ ದೇರಾಜೆ ಹಾಗೂ ಉಪಾಧ್ಯಕ್ಷರಾದ ನೇತ್ರಾವತಿ ಕಲ್ಲಾಜೆ ಮತ್ತು ಸದಸ್ಯರು, ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ ಚಂದ್ರಶೇಖರ್ ಕರಿಮಜಲು, ಉಳ್ಳಾಕುಲು ಕಲಾರಂಗದ ಅಧ್ಯಕ್ಷರಾದ ಕವನ್ ಪಲ್ಲೋಡಿ, ಮಿತ್ರಮಂಡಲ ನಾಗತೀರ್ಥ ಇದರ ಅಧ್ಯಕ್ಷರಾದ ರಾಜೇಶ್ ಕುದ್ವ, ಯುವಜನ ಸಂಯುಕ್ತ ಮಂಡಳಿ ನಿರ್ದೇಶಕರಾದ ಪವನ್ ಪಲ್ಲತ್ತಡ್ಕ, ದೈಹಿಕ ಶಿಕ್ಷಣ ಶಿಕ್ಷಕರಾದ ಸಂದೀಪ್ ಪಲ್ಲೋಡಿ ಉಪಸ್ಥಿತರಿದ್ದರು.





























