ಸುಳ್ಯ : ಕಸ್ತೂರಿ ರಂಗನ್ ವರದಿ ಬಗ್ಗೆ ಸರಕಾರ ಅಧ್ಯಯನಕ್ಕೆ ರಚಿಸಿರುವ ಸಚಿವ ಸಂಪುಟ ಉಪಸಮಿತಿ ವರದಿ ಕೈಬಿಡುವ ಬಗ್ಗೆ ಕೇಂದ್ರಕ್ಕೆ ನಿರ್ಣಯ ಕಳಿಸುವ ಬಗ್ಗೆ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಯೋಜನೆ ಕೈಬಿಡುವುದಾಗಿ ಮಾಧ್ಯಮಗಳಿಗೆ ನೀಡಿರುವ ಹೇಳಿಕೆ ಸ್ವಾಗತಾರ್ಹ.
ಈ ಬಗ್ಗೆ ಸರಕಾರ ಬಾದಿತ ಪ್ರತೀ ಗ್ರಾಮ ಪಂಚಾಯತ್ ಗಳಿಗೆ ಯೋಜನೆ ಕೈಬಿಟ್ಟಿರುವ ಬಗ್ಗೆ ಲಿಖಿತ ಮಾಹಿತಿ ನೀಡಬೇಕು ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಒತ್ತಾಯಿಸಿದ್ದಾರೆ. ಕುಕ್ಕೆಸುಬ್ರಹ್ಮಣ್ಯದಲ್ಲಿ ಮಂಗಳವಾರ ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಡಿ.೩೧ ರೊಳಗೆ ರಾಜ್ಯ ಸರಕಾರ ವರದಿ ಅನುಷ್ಠಾನ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಸೂಚಿಸಿತ್ತು.ಇದರ ವಿರುದ್ದ ತಕ್ಷಣ ದ.ಕ.ಹಾಗು ನೆರೆಯ ಕೊಡಗು ಜಿಲ್ಲೆಗೆ ಸಂಬಂದಪಟ್ಟ ಸುಳ್ಯ, ಕಡಬ, ಬೆಳ್ತಂಗಡಿ ತಾಲೂಕಿನ ಮತ್ತು ಮಡಿಕೇರಿ ತಾಲೂಕಿನ ಸಂಪಾಜೆ ಗ್ರಾಮದ ಬಾದಿತ ಗ್ರಾಮಗಳಲ್ಲಿ ಸಂಚರಿಸಿ ಮೊದಲ ಹಂತದಲ್ಲಿ ಪಂಚಾಯತ್ ಗೆ ಮನವಿ ಅರ್ಪಣೆ, ಹೋಬಳಿ ಮತ್ತು ತಾಲೂಕು ಕೇಂದ್ರಗಳಲ್ಲಿ ಪಕ್ಷಾತೀತವಾಗಿ ಪ್ರತಿಭಟನೆ, ಧರಣಿ ಸತ್ಯಾಗ್ರಹ, ಸರಕಾರಕ್ಕೆ ಮನವಿ ಅರ್ಪಣೆಯಂತಹ ಹೋರಾಟಗಳನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತ್ತು. ಇದರ ಪರಿಣಾಮವಾಗಿ ಸರಕಾರ ಎಚ್ಚೆತ್ತು ವರದಿ ವಿರುದ್ಧದ ಜನಾಭಿಪ್ರಾಯ ವನ್ನ ಗಮನಿಸಿ ಯೋಜನೆ ಕೈಬಿಡುವ ನಿರ್ಣಯಕ್ಕೆ ಸರಕಾರ ಬದ್ದವಾಗಿರಬೇಕು ಎಂದು ವೇದಿಕೆ ಆಗ್ರಹಿಸುತ್ತದೆ. ಲಿಖಿತ ಭರವಸೆ ನೀಡುವರೆಗೆ ಹೋರಾಟ ನಿರಂತವಾಗಿರುತ್ತದೆ ಎಂದು ವಿವರಿಸಿದರು.ಪತ್ರಿಕಾಗೋಷ್ಠಿಯಲ್ಲಿ ವೇದಿಕೆ ಜಿಲ್ಲಾ ಸಮಿತಿ ಸದಸ್ಯರಾದ ಸೂರ್ಯನಾರಾಯಣ ರಾವ್ ಶಿಶಿಲ, ಜಯಪ್ರಕಾಶ್ ಕೂಜುಗೋಡು, ರವೀಂದ್ರ ರುದ್ರಪಾದ, ಭರತ್ ಕನ್ನಡ್ಕ, ಮಡಿಕೇರಿ ತಾಲೂಕು ಸಂಚಾಲಕ ಬನ್ನೂರುಪಟ್ಟೆ ಪ್ರದೀಪ್ ಕುಮಾರ್ ಕರಿಕೆ, ಸುಳ್ಯ ತಾಲೂಕಿನ ಪ್ರಮುಖರಾದ ಉಮೇಶ್ ಕಜ್ಜೋಡಿ, ಜಯರಾಮ ಕಟ್ಟೆಮನೆ,ಜ್ಯೋತಿ ಪ್ರೇಮಾನಂದ ಮೆಟ್ಟಿನಡ್ಕ ರವಿಕುಮಾರ್ ಕಿರಿಭಾಗ,ತೇಜಕುಮಾರ್ ತಳೂರು ಉಪಸ್ಥಿತರಿದ್ದರು