ಪುತ್ತೂರು: ಕುರಿಯ ಗ್ರಾಮದ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜ.5 ರಂದು ಕೆಮ್ಮಿಂಜೆ ನಾಗೇಶ ತಂತ್ರಿರವರ ನೇತೃತ್ವದಲ್ಲಿ 12 ನೇ ವರ್ಷದ ಪ್ರತಿಷ್ಟಾ ವಾರ್ಷಿಕೋತ್ಸವ ನಡೆಯಿತು.
ಬೆಳಿಗ್ಗೆ ದೇವತಾ ಪ್ರಾರ್ಥನೆ,ಮಹಾಗಣಪತಿ ಹೋಮ, ಕಲಶ ಪೂಜೆ, ಆಶ್ಲೇಷ ಬಲಿ,ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ದೇವರಿಗೆ ಕಲಶಾಭಿಷೇಕ ನಡೆಯಿತು. ಮಧ್ಯಾಹ್ನ ಮಹಾಪೂಜೆ ಬಳಿಕ ಪ್ರಸಾದವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು.
ರಾತ್ರಿ ದೈವಗಳ ಭಂಡಾರ ತೆಗೆದು ಮಹಾಪೂಜೆ, ಪ್ರಸಾದವಿತರಣೆ ಬಳಿಕ ಅನ್ನಸಂತರ್ಪಣೆ ಜರಗಿತು. ಶ್ರೀದೇವರ ಬಲಿ ಹೊರಟು ಉತ್ಸವ,ವಸಂತಕಟ್ಟೆ ಪೂಜೆ, ದರ್ಶನಬಲಿ ಉತ್ಸವ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ವೈದಿಕ ಮಂತ್ರಾಕ್ಷತೆ ನಡೆಯಿತು.
ಬಳಿಕ ಕ್ಷೇತ್ರ ದೈವಗಳಿಗೆ ನೇಮೋತ್ಸವ ಜರಗಿತು.ವಿಶೇಷ ಸುಡುಮದ್ದು ಪ್ರದರ್ಶನ: ರಾತ್ರಿ ಶ್ರೀ ದೇವರ ಬಲಿ, ವಸಂತ ಕಟ್ಟೆ ಪೂಜೆ,ದರ್ಶನ ಬಲಿಯ ಸಂದರ್ಭದಲ್ಲಿ ನಡೆದ ಆಕರ್ಷಕ ವಿಶೇಷ ಸುಡುಮದ್ದು ಪ್ರದರ್ಶನನೋಡುಗರ ಕಣ್ಮನ ಸೆಳೆಯಿತು.