ಪುತ್ತೂರು: ಕರ್ನಾಟಕ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಆಶ್ರಯದಲ್ಲಿ ‘ಕೋವಿಡ್-19 ನಂತರದ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿ’ ಎಂಬ ವಿಷಯದ ಕುರಿತು ಆಯೋಜಿಸಲಾದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಕಾಲೇಜಿನ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿನಿ ಚೈತ್ರಾ ರವರು ದ್ವಿತೀಯ ಬಹುಮಾನ ಗಳಿಸಿರುತ್ತಾರೆ.

ಇವರು ಅರಿಯಡ್ಕ ಗ್ರಾಮದ ಮಾವಿಲಕೊಚ್ಚಿ ನಿವಾಸಿ ಕೊರಗಪ್ಪ ನಾಯ್ಕ ಹಾಗೂ ರತ್ನಾ ದಂಪತಿ ಪುತ್ರಿ.