ಕರಾವಳಿಯ ಯುವ ಪ್ರತಿಭೆಗಳ ಹೊಸ ಆಲ್ಬಮ್ ಸಾಂಗ್ ‘FRIEND ZONE’ ಫಸ್ಟ್ ಲುಕ್ ಪೋಸ್ಟರ್ ಇಂದು ಬಿಡುಗಡೆಗೊಂಡಿದ್ದು, ಇನ್ನೇನು ಕೆಲವೇ ದಿನಗಳಲ್ಲಿ NA CREATION OFFICIAL ಯುಟ್ಯೂಬ್ ಚಾನೆಲ್ ನಲ್ಲಿ ಆಲ್ಬಮ್ ಸಾಂಗ್ ಬಿಡುಗಡೆಗೊಳ್ಳಲಿದೆ.

ಸಾಂಗ್ ನಾ ಫಸ್ಟ್ ಲುಕ್ ಪೋಸ್ಟರ್ ಅನ್ನು ಪುತ್ತೂರು IRCMD ಶಿಕ್ಷಣ ಸಂಸ್ಥೆಯ ಮಾಲಕರಾದಂತ ಗಣೇಶ್ ಮತ್ತು ಪ್ರಪುಲ್ಲಾ ಗಣೇಶ್ ರವರು ಬಿಡುಗಡೆಗೊಳಿಸಿದ್ದು, ಸನತ್ ಕೆ ಅವರ ನಿರ್ದೇಶನ ಪ್ರತಾಪ್ ಸವಣೂರು ರವರ ನಿರ್ಮಾಣದಲ್ಲಿ ಈ ಆಲ್ಬಮ್ ಸಾಂಗ್ ಮೂಡಿ ಬರಲಿದ್ದು, ಸಾಂಗ್ ನಲ್ಲಿ ಪ್ರತಾಪ್ ಸವಣೂರು, ನಿಶ್ಮಿತ್ ಆಚಾರ್ಯ ಸವಣೂರು ಅನುಶ್ರೀ ಸಾಮೆತ್ತಡ್ಕ, ಪ್ರಿಯಾಂಕಾ ಶರತ್ ರಾಜ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು ಮೋನಿಶ್ ಕುಮಾರ್ ಪಾವೂರು, ಅನುಶ್ರೀ ಸಾಮೆತ್ತಡ್ಕ ಕಂಠದಾನ ಮಾಡಿದ್ದಾರೆ.

FMT ಸ್ಟುಡಿಯೋ ದೇರ್ಲಕಟ್ಟೆ ಮಾಸ್ಟರಿಂಗ್ ಮತ್ತು ಮಿಕ್ಸಿಂಗ್ ಮೋಕ್ಷಿತ್ ಕುಮಾರ್ ರವರ ಕ್ಯಾಮರಾ ಮತ್ತು ಎಡಿಟಿಂಗ್ ನಾ ಕೈಚಳಕದಲ್ಲಿ ಈ ಆಲ್ಬಮ್ ಸಾಂಗ್ ಮೂಡಿ ಬಂದಿದೆ.
ತಂಡದ ನಿರ್ವಹಣೆಯಲ್ಲಿ ಹರ್ಷಿತ ಕೆ , ಸಂಗೀತ ಕೆ, ಶಿವಪ್ರಸಾದ್ ,ನವ್ಯ ಕಾರ್ಯನಿರ್ವಹಿಸಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಈ ಸಾಂಗ್ ತೆರೆಕಾಣಲಿದೆ…