ನೆಲ್ಯಾಡಿ: ಗುಂಡ್ಯದಲ್ಲಿ ನಿಲ್ಲಿಸಿದ್ದ ಲಾರಿಯೊಂದರಿಂದ ಲಕ್ಷಾಂತರ ರೂ. ಮೌಲ್ಯದ ರಬ್ಬರ್‌ಶೀಟ್ ಕಳವುಗೊಂಡಿರುವ ಪ್ರಕರಣವೊಂದು ಕೆಲ ದಿನಗಳ ಹಿಂದೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಬಂಧಿತ ಆರೋಪಿಗಳಿಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ ಎಂದು ತಿಳಿದು ಬಂದಿದೆ.
ಬಂಧಿತ ಆರೋಪಿಗಳಾದ ಕಡಬ ಶಿರಾಡಿ ಗ್ರಾಮದ ಮಿತ್ತಮಜಲು ನಿವಾಸಿ ತೋಮಸ್ (33), ಎಡಪ್ಪಾಟ್ ನಿವಾಸಿ ಇ.ಪಿ ವರ್ಗಿಸ್(48), ಪೇರಮಜಲು ನಿವಾಸಿ ಶೀನಪ್ಪ(46) ರವರಿಗೆ ಪುತ್ತೂರು ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
ಆರೋಪಿಗಳ ಪರ ವಕೀಲರಾದ ದುರ್ಗಾಪ್ರಸಾದ್, ಸಂತೋಷ್ ಕುಮಾರ್, ಜಯರಾಮ ರೈ ಕೆ, ಹೇಮಲತಾ ರವರು ವಾದಿಸಿದರು.