ಪುತ್ತೂರು: ಪ್ರತಿಷ್ಠಿತ ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷರಾಗಿ ಪ್ರಗತಿಪರ ಕೃಷಿಕ, ಉದ್ಯಮಿ ಸತೀಶ್ ಕುಮಾರ್ ಕೆಡಂಜಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಭಾರತೀಯ ಜೀವ ವಿಮಾ ನಿಗಮದ ವಿಮಾ ಸಲಹೆಗಾರ, ರಂಗ ಕಲಾವಿದ ನಾಗೇಶ್ ಬಲ್ನಾಡ್ ಆಯ್ಕೆಯಾಗಿದ್ದಾರೆ.
ಸತೀಶ್ ಕುಮಾರ್ ಕೆಡಂಜಿ
ನಾಗೇಶ್ ಬಲ್ನಾಡ್
ಸೆ.15 ರಂದು ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ಉಪಾಧ್ಯಕ್ಷರಾಗಿ ಯುವ ವಾಹಿನಿ ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ಡಾ.ಸದಾನಂದ ಕುಂದರ್, ನರಿಮೊಗರು ಮಾಜಿ ಗ್ರಾ.ಪಂ ಅಧ್ಯಕ್ಷೆ, ತಾಲೂಕು ಮಹಿಳಾ ಸಂಘದ ಅಧ್ಯಕ್ಷೆ ಚಂದ್ರಕಲಾ ಮುಕ್ವೆ, ಜತೆ ಕಾರ್ಯದರ್ಶಿಯಾಗಿ ಕುಂಜೂರುಪಂಜ ಗ್ರಾಮ ಸಮಿತಿ ಅಧ್ಯಕ್ಷ ಚಿದಾನಂದ ಸುವರ್ಣ ಕುಂಜೂರುಪಂಜ, ಕೋಶಾಧಿಕಾರಿಯಾಗಿ ನರಿಮೊಗರು ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ, ಮುಂಡೂರು ಗ್ರಾ.ಪಂ ಸದಸ್ಯ ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್ ಆಯ್ಕೆಯಾಗಿದ್ದಾರೆ.
ಚಂದ್ರಕಲಾ ಮುಕ್ವೆ
ಅವಿಭಜಿತ ಪುತ್ತೂರು ಹಾಗೂ ಕಡಬ ತಾಲೂಕಿನ 51 ಗ್ರಾಮ ಸಮಿತಿಗಳು, 12 ವಲಯಗಳ ಸಂಚಾಲಕರು, 12 ನಗರ ಪ್ರತಿನಿಧಿಗಳು, ಪುತ್ತೂರು, ಉಪ್ಪಿನಂಗಡಿ ಯ ಯುವ ವಾಹಿನಿಯ 2 ಅಧ್ಯಕ್ಷರು, ಓರ್ವ ಬಿಲ್ಲವ ಮಹಿಳಾ ಪ್ರತಿನಿಧಿ ಹಾಗೂ ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘ ಅಧ್ಯಕ್ಷರು ಸೇರಿದಂತೆ ಒಟ್ಟು ೮೦ ಮಂದಿ ಉಪಸ್ಥಿತಿಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಗಿದೆ.
ಚಿದಾನಂದ ಸುವರ್ಣ
ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್