ಪುತ್ತೂರು : ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನಾಚರಣೆಯನ್ನು ಬನ್ನೂರು ಟೀಮ್ ಮೋದಿ ನೇತೃತ್ವದಲ್ಲಿ ಬನ್ನೂರು ಜಂಕ್ಷನ್ ನಲ್ಲಿ ಸುಮಾರು 20 ಫೀಟ್ ಎತ್ತರದ ಬೃಹತ್ ಕಟೌಟ್ ಅಳವಡಿಸಿ ಅದಕ್ಕೆ ಬೃಹತ್ ಉದ್ದದ ಮಾಲಾರ್ಪಣೆ ಮಾಡಿ ಸಿಹಿತಿಂಡಿ ಹಂಚಿ ಆಚರಣೆ ಮಾಡಲಾಯಿತು.

ನಗರಸಭೆ ಅಧ್ಯಕ್ಷ ಕೆ ಜೀವಂಧರ್ ಜೈನ್, ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ಬನ್ನೂರು, ಸದಸ್ಯರಾದ ಮೋಹಿನಿ ವಿಶ್ವನಾಥ ಗೌಡ, ಮಾಜಿ ಉಪಾಧ್ಯಕ್ಷ ವಿಶ್ವನಾಥ ಗೌಡ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಸಹಜ್ ರೈ, ಗ್ರಾಮಾಂತರ ಮಂಡಲ ಯುವ ಮೋರ್ಚಾ ಅಧ್ಯಕ್ಷ ನವೀನ್ ಪಡ್ನೂರು, ರತನ್ ರೈ ಕುಂಬ್ರ, ರತ್ನಾಕರ ರೈ, ಮನೋಹರ್ ರೈ, ಶೇಖರ್ ಬಿರ್ವ ಬನ್ನೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು