ಶಾಸಕ ಸಂಜೀವ ಮಟOದೂರು ರವರು ತನ್ನ ಕ್ಷೇತ್ರವಾದ ಪುತ್ತೂರಿನ ಅಭಿವೃದ್ಧಿ ಗೇನಾದರೂ ಕೆಲಸ ಮಾಡುವುದು ಬಿಟ್ಟು, ಹೋದಲ್ಲಿ ಬಂದಲ್ಲಿ ಕಾಂಗ್ರೆಸ್ ನ್ನು ಟೀಕಿಸುವ, ಬೈಯುವ ಕೆಲಸ ಮಾಡುತ್ತಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈಯವರು ಆರೋಪಿಸಿದ್ದಾರೆ.
ಅವರು ಪುತ್ತೂರು ನಗರ ವ್ಯಾಪ್ತಿಯ ಗೋಳಿಕಟ್ಟೆ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿಶಾಸಕ ಸಂಜೀವ ಮಟOದೂರು ರವರು,ಮಾಜಿ ಶಾಸಕಿ ಶಕುಂತಲಾ ಟಿ ಶೆಟ್ಟಿಯವರು ಶಾಸಕರಾಗಿದ್ದಾಗ ಮಂಜೂರು ಆದ ಕಾಮಗಾರಿಗಳನ್ನು ಗುದ್ದಲಿ ಪೂಜೆ ಹಾಗೂ ಉದ್ಘಾಟಿಸುವ ಕೆಲಸ ಮಾತ್ರ ಮಾಡುತ್ತಿದ್ದಾರೆ,ಹೊರತು ಬೇರೆ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ,ಶಾಸಕರಾಗಿ ಇವರು ಮಾಡಿದ ದೊಡ್ಡ ಕೆಲಸವೇನಂದರೆ ಗೂಡ0ಗಡಿ ತೆರವು ಗೊಳಿಸಿ ಬಡವರ ಹೊಟ್ಟೆಗೆ ಹೊಡೆದಿರುವುದು, ಪುತ್ತೂರಿನಲ್ಲಿ ಹಲವಾರು ಜ್ವಲOತ ಸಮಸ್ಯೆಗಳಿವೆ,ಇದಕ್ಕೆ ಸರಕಾರದಿಂದ ಪರಿಹಾರ ಒದಗಿಸಲು ಶಾಸಕರು ಪ್ರಯತ್ನಿಸುಸಿರುವುದಿಲ್ಲ, ಇವರು ಜನರ ಸಮಸ್ಯೆ ಗಳಿಗೆ ಸ್ಪಂದಿಸುವ ಬದಲು ಮೂರೂವರೇ ವರ್ಷ ಸುಮ್ಮನೆ ಕಾಲಹರಣ ಮಾಡಿರುತ್ತಾರೆ ಎಂದು ಆರೋಪಿಸಿದ ಅವರು ಶಾಸಕರಿಗೆ ಕಾಂಗ್ರೆಸ್ ನ್ನು ಟೀಕಿಸುವ ನೈತಿಕ ಹಕ್ಕಿಲ್ಲ ಎಂದರು.

ಈ ಪ್ರದೇಶದ ನಗರ ಸಭಾ ಸದಸ್ಯರಾಗಿ ಆಯ್ಕೆ ಯಾದ ರಿಯಾಜ್ ಪರ್ಲಡ್ಕರವರು ಈ ಭಾಗದ ಜನರ ಕಷ್ಟ ಸುಖದಲ್ಲಿ ಭಾಗಿಯಾಗುತ್ತಿದ್ದಾರೆ,ಈ ವಾರ್ಡಿನ ಹೆಚ್ಚಿನ ಬಡವರಿಗೆ ಆಹಾರ ಕಿಟ್ ಒದಗಿಸಿರುತ್ತಾರೆ,ಇವರ ಸಹಯೋಗದಿಂದ ಕೋರೋನ ರೋಗಿಗಳಿಗೆ ಉಚಿತ ಆಂಬುಲೆನ್ಸ್ ಸೇವೆ ಒದಗಿಸಲಾಗಿರುತ್ತದೆ,ಇದಕ್ಕೆ ಇವರು ಅಭಿನಂದನಾರ್ಹರು ಎಂದು ಹೇಳಿದರು.

ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಆಲಿ ಮಾತನಾಡಿ ಇತ್ತೀಚಿಗಿನ ದಿನಗಳಲ್ಲಿ ಕೆಲವು ಶಕ್ತಿಗಳು ಕೋಮುಭಾವನೆ ಕೆರಳಿಸಿ ಪುತ್ತೂರಿನ ಶಾಂತಿ ಸಾಮರಸ್ಯವನ್ನು ಕೆಡಿಸುವ ಹುನ್ನಾರ ನಡೆಸುತ್ತಿದೆ,ಇದರ ಬಗ್ಗೆ ಜನರು ಜಾಗ್ರತರಾಗಬೇಕು ಎಂದು ಹೇಳಿದ ಆಲಿಯವರು ಇಂತಹ ಸಮಾಜಘಾತಕ ಶಕ್ತಿ ಗಳನ್ನು ಪೊಲೀಸ್ ರು ನಿರ್ಧಾಕ್ಷಿಣ್ಯವಾಗಿ ಮಟ್ಟ ಹಾಕಬೇಕಾಗಿದೆ ಎಂದು ಹೇಳಿದರು,
ಬ್ಲಾಕ್ ಉಪಾಧ್ಯಕ್ಷರಾದ ಮೌರಿಸ್ ಮಸ್ಕರೇನಸ್ ಮಾತನಾಡಿ ಅಲ್ಪ ಸಂಖ್ಯಾತರು ಅದರಲ್ಲಿ ಮುಸಲ್ಮಾನರು ಸರಕಾರಿ ಹುದ್ದೆಯನ್ನು ಪಡೆಯಲು ಆಸಕ್ತಿ ತೋರುವುದಿಲ್ಲ, ಇನ್ನು ಮುಂದಕ್ಕೆ ಸರಕಾರಿ ನೌಕರಿ ಪಡೆಯಲು ಮುಂದಾಗ ಬೇಕು ಈ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಅರಿವು ಮೂಡಿಸುವ ಕೆಲಸ ಮಾಡಬೇಕೆಂದರು, ಬ್ಲಾಕ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ವಿ ಎಚ್ ಎ ಶಕೂರ್ ಹಾಜಿ ಮಾತನಾಡಿ ಮತ ದ್ರುವೀಕರಣ ಮಾಡುವ ದುರುದ್ದೇಶ ದಿಂದ ಬಿಜೆಪಿಯವರು ಅಲ್ಪ ಸಂಖ್ಯಾತ ಸಮುದಾಯವನ್ನು ಟಾರ್ಗೆಟ್ ಮಾಡುತ್ತಿದೆ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರ ಅಲ್ಪ ಸಂಖ್ಯಾತರಿಗೆ ಅನ್ಯಾಯ ಮಾಡುತ್ತಿದೆ ಎಂದರು ಈ ಸಭೆಯಲ್ಲಿ ಹಿರಿಯ ಕಾಂಗ್ರೆಸ್ಸಿಗ ರಾದ ಹುಸೈನಾರ್ ಹಾಜಿ, ಖಾದರ್ ಹಾಜಿ ಹಾಗೂ ಕಾಂಗ್ರೆಸ್ ಕೋರೋನ ವಾರಿಯರ್ಸ್ ಆದ ಆಲಿ ಪರ್ಲಡ್ಕ ಯೋಗ ಪಟು ಅಸ್ಲಾಂ ಭಾಯಿ ರವರಿಗೆ ಗಣ್ಯರ ಸಮ್ಮುಖದಲ್ಲಿ ಸನ್ಮಾನ ಮಾಡಲಾಯಿತು.

ಈ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಶರೊನ್ ಸಿಕ್ವೆರಾ, ಬ್ಲಾಕ್ ಎಸ್ ಸಿ ಘಟಕದ ಅಧ್ಯಕ್ಷ ರಾದ ಕೇಶವ ಪಡೀಲ್, ರಾಜ್ಯ ಕೊಂಕಣಿ ಅಕಾಡೆಮಿಯ ಮಾಜಿ ಸದಸ್ಯ ದಾಮೋದರ ಭಂಡಾರ್ಕಾರ್, ಹಾಗೂ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು ನಗರ ಸಭಾ ಸದಸ್ಯ ರಿಯಾಜ್ ಪರ್ಲಡ್ಕ ರವರು ಸ್ವಾಗತಿಸಿ, ಕಾರ್ಯಕ್ರಮದ ನಿರೂಪಣೆ ಗೈದರು, ಮೂಸ ಹಾಜಿ ಕುಂಜೂರು ಇವರ ಅಧ್ಯಕ್ಷತೆಯಲ್ಲಿ ಸಂಖ್ಯೆ 108 ರ ಬೂತ್ ಸಮಿತಿ ರಚಿಸ ಲಾಯಿತು