ವಿಟ್ಲ : ವಿಟ್ಲ ಪದವಿ ಪೂರ್ವ ಕಾಲೇಜಿನ ದೈಹಿಕ ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸುಚೇತನ್ ಜೈನ್ ಮೈಸೂರಿನಲ್ಲಿ ಹೃದಯಾಘಾತದಿಂದ ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಕಾರ್ಕಳ ನಿವಾಸಿಯಾಗಿರುವ ಇವರುವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇವರು ಕಬಡ್ಡಿ, ಶಟಲ್ ಮೊದಲಾದ ಕ್ರೀಡೆಗಳಲ್ಲಿ ವಿದ್ಯಾರ್ಥಿಗಳಿಗೆ ತರಭೇತಿ ನೀಡಿ, ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಹೆಸರು ತಂದು ಕೊಟ್ಟಿದ್ದರು.
ಇವರಿಂದ ತರಬೇತಿ ಪಡೆದ ಹಲವು ವಿದ್ಯಾರ್ಥಿಗಳು ಇಂದು ಸರ್ಕಾರಿ ಕೆಲಸದಲ್ಲಿದ್ದಾರೆ.ಸುಚೇತನ್ ಜೈನ್ ಸರಳ ಸಜ್ಜನ ದೈಹಿಕ ಶಿಕ್ಷಕರಾಗಿದ್ದಾರೆ.
ವಿಟ್ಲದ ನೂರಾರು ವಿದ್ಯಾರ್ಥಿಗಳನ್ನು ಕ್ರೀಡೆಯಲ್ಲಿ ಪಳಗಿಸಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ. ರೋಟರಿ ಕ್ಲಬ್ ನ ಒಬ್ಬ ಸಕ್ರಿಯ ಸದಸ್ಯರಾಗಿದ್ದಾರೆ. ಅವರ ಏಕೈಕ ಮಗಳು ಕೂಡಾ ಕ್ರೀಡೆಯಲ್ಲಿ ಚಾಂಪಿಯನ್ ಆಗಿದ್ದಾಳೆ.
ವಿಟ್ಲ ಪರಿಸರದ ಮಕ್ಕಳನ್ನು ಉತ್ತೇಜಿಸಿ ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದ ಆಟಕ್ಕೆ ಸಜ್ಜುಗೊಳಿಸುತ್ತಿದ್ದರು. ತನ್ನ ಸ್ವಂತ ಕಿಸೆಯಿಂದ ಹಣ ಹಾಕಿ ಕ್ರೀಡಾ ಪ್ರೇಮ ಮೆರೆಯುತ್ತಿದ್ದರು. ಇತ್ತೀಚೆಗೆ ಅವರ ದೃಷ್ಟಿ ಕ್ಷೀಣವಾಗಿತ್ತು. ಇಂದು ಮೈಸೂರಿಗೆ ತೆರಳಿದ್ದ ಜೈನ್ ಅವರಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.