ಪುತ್ತೂರು: ಮುಂಡೂರು ಗ್ರಾಮದ ಕಡ್ಯ ನಿವಾಸಿ ನಿವೃತ್ತ ಎ.ಎಸ್.ಐ.ಶಾಂತಪ್ಪ ಗೌಡ( 71) ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರು 1976 ರಲ್ಲಿ ಪೋಲೀಸ್ ಇಲಾಖೆಗೆ ಕರ್ತವ್ಯ ಕ್ಕೆ ಸೇರಿದ್ದು, 2011 ರಲ್ಲಿ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಎ.ಎಸ್.ಐ ಹುದ್ದೆಯಿಂದ ನಿವೃತ್ತಿ ಹೊಂದಿದ್ದರು.
ಬಳಿಕ ಪುತ್ತೂರು ಕಡ್ಯೆ ಮನೆಯಲ್ಲಿ ಕೃಷಿ ಜೀವನಕ್ಕೆ ಹೊಂದಿಕೊಂಡಿದ್ದರು. ಸಿಬ್ಬಂದಿಯಾಗಿ ಪೋಲೀಸ್ ಇಲಾಖೆಗೆ ಸೇರಿದ ಇವರು ಎ.ಎಸ್.ಐ.ಹುದ್ದೆ ಅಲಂಕರಿಸಿ ನಿವೃತ್ತರಾಗಿದ್ದರು.
ಕಳೆದ ಎರಡು ದಿನಗಳಿಂದ ಅಸೌಖ್ಯದಿಂದ ಕೂಡಿದ್ದ ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಮೃತರು ಒಂದು ಹೆಣ್ಣು ಹಾಗೂ ಎರಡು ಗಂಡು ಮಕ್ಕಳನ್ನು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.