ಪುತ್ತೂರು: ಎಪಿಎಂಸಿ ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತ ಅಕಾಡೆಮಿಯಲ್ಲಿ 2021ರ ಸಾಲಿನ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗೆ ತರಬೇತಿ ಪಡೆದಿದ್ದ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗುವ ಮೂಲಕ ಪ್ರಥಮ ಬ್ಯಾಚ್ ನಲ್ಲೇ ಅತ್ಯುತ್ತಮ ಫಲಿತಾಂಶ ಬಂದಿದೆ.
ಪ್ರಶ್ನೆ ಪತ್ರಿಕೆ -1 ರಲ್ಲಿ ಶ್ರೀಮತಿ ಹೆಚ್.ಸಿ.ಶ್ವೇತಾ , ಪ್ರಶ್ನೆ ಪತ್ರಿಕೆ 1&2ರಲ್ಲಿ ಶ್ರೀಮತಿ ಚಂದನ ಎಸ್ , ಪ್ರಶ್ನೆ ಪತ್ರಿಕೆ-2 ರಲ್ಲಿ ಶ್ರೀಮತಿ ನಿಶಾ ಇವರು ತೇರ್ಗಡೆಯಾಗಿದ್ದಾರೆ.
ಈ ಬಗ್ಗೆ ವಿದ್ಯಾಮಾತ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈರವರು ಸಂತಸ ವ್ಯಕ್ತಪಡಿಸಿದ್ದು, “ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ವಿದ್ಯಾಮಾತ ಅಕಾಡೆಮಿ ನಡೆಸುತ್ತಿರುವ ಜಾಗೃತಿಗೆ ಸೂಕ್ತ ಸ್ಪಂದನೆ ಸಿಗುತ್ತಿದ್ದು ಉತ್ತಮ ಫಲಿತಾಂಶ ಬಂದಿರುವುದು ನಮ್ಮ ಆತ್ಮವಿಶ್ವಾಸ ಹೆಚ್ಚಿಸಿದೆ” ಎಂದು ತಿಳಿಸಿದ್ದಾರೆ.
ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿತ್ತು ಈ ಸಂದರ್ಭದಲ್ಲಿ ಅರ್ಜಿ ಸಲ್ಲಿಸಿದ ಆಸಕ್ತ ಅಭ್ಯರ್ಥಿಗಳನ್ನು ಗುರುತಿಸಿ ವಿದ್ಯಾಮಾತ ಅಕಾಡೆಮಿಯು ಒಂದು ತಿಂಗಳು ದಿನನಿತ್ಯ ಆನ್ಲೈನ್ ಮೂಲಕ ತರಬೇತಿಯನ್ನು ನೀಡಿತ್ತು.ಪೊಲೀಸ್ ನೇಮಕಾತಿ 2021 ರ ಬಗ್ಗೆಯೂ ವಿದ್ಯಾಮಾತ ಅಕಾಡೆಮಿ ತರಬೇತಿ ನೀಡುತ್ತಿದ್ದು ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದೆ.
ಶಿಕ್ಷಕರ ಅರ್ಹತಾ ಪರೀಕ್ಷೆಗೆ ತರಬೇತಿ ನೀಡಿದ ತರಬೇತುದಾರರಾದ ಅರವಿಂದ ಚೊಕ್ಕಾಡಿ, ಚಂದ್ರಶೇಖರ್ ರಾವ್, ಡಾ.ವಿದ್ಯಾವತಿ ಜೈನ್, ರಮ್ಯಾ ಭಾಗ್ಯೇಶ್ ರೈ, ವಿಜೇತಾ, ವಿನುತಾ ಚಂದ್ರಶೇಖರ್, ಭಾಗ್ಯಶ್ರೀ ಕೆ.ಕೆ ಮತ್ತು ಕುಸುಮಾವತಿಯವರನ್ನು ಭಾಗ್ಯೇಶ್ ರೈಯವರು ಅಭಿನಂದಿಸಿದ್ದಾರೆ.