ಕಾವು: ಬಿಜೆಪಿ ಮಾಡ್ನೂರು ಶಕ್ತಿ ಕೇಂದ್ರದ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ಪ್ರಯುಕ್ತ ಮೋದಿಯವರಿಗೆ ಆರೋಗ್ಯ, ಆಯುಷ್ಯ ಹಾಗೂ ಅಧಿಕಾರದ ಯಶಸ್ವಿಗಾಗಿ ಕಾವು ಶ್ರೀ ಪಂಚಲಿಂಗೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ,ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾಡ್ನೂರು ಶಕ್ತಿಕೇಂದ್ರ ಸಂಚಾಲಕ ಲೋಕೇಶ್ ಚಾಕೋಟೆ,ಕಾವು ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ನನ್ಯ ಅಚ್ಚುತ ಮೂಡಿತ್ತಾಯ, ಅರಿಯಡ್ಕ ಗ್ರಾಮ ಪಂಚಾಯತ್ ಅದ್ಯಕ್ಷರಾದ ಸೌಮ್ಯ ಸುಬ್ರಹ್ಮಣ್ಯ ಮುಂಡಕೊಚ್ಚಿ, ತಾಲೂಕು ಸಾಂಸ್ಕೃತಿಕ ಪ್ರಕೋಷ್ಠ ದ ಸಂಚಾಲಕರಾದ ಭಾಸ್ಕರ ಬಲ್ಯಾಯ ಕಾವು, ತಾಲೂಕು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಕಾವು, ಪ್ರಮುಖರಾದ ಶ್ರೀಧರ್ ರಾವ್ ನಿಧಿಮುಂಡ, ಪೂವಪ್ಪ ನಾಯ್ಕ, ರಾಮಣ್ಣ ನಾಯ್ಕ ಆಚಾರಿಮೂಲೆ, ಹೊನ್ನಪ್ಪ ಪೂಜಾರಿ ಪಿಲಿಪಂಜರ,ಧನಂಜಯ ನಾಯ್ಕ, ಸೀತಾರಾಮ ಮೇಲ್ಪದೆ, ಸುಬ್ರಮಣ್ಯ ಮುಂಡಕೊಚ್ಚಿ ಉಪಸ್ಥಿತರಿದ್ದರು.