ಬಂಟ್ವಾಳ: ಬಾಲ್ಯವಿವಾಹ ಕಾಯ್ದೆ ಜಾರಿಯಲ್ಲಿದ್ದರು ಇತ್ತೀಚಿಗೆ ಬಾಲ್ಯವಿವಾಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ತುಂಬೆ ಎಂಬಲ್ಲಿ ಬಾಲ್ಯ ವಿವಾಹ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬಂಟ್ವಾಳ ಗ್ರಾಮಾಂತರದ ತುಂಬೆ ಎಂಬಲ್ಲಿ ಸೆ.19 ರಂದು ಬಾಲ್ಯವಿವಾಹ ನಡೆಯುತ್ತಿದೆ ಎಂಬ ಮಾಹಿತಿ ಚೈಲ್ಡ್ ಲೈನ್ ಗೆ ಬಂದಿದ್ದು, ಮಾಹಿತಿ ಪ್ರಕಾರ ಚೈಲ್ಡ್ ಲೈನ್ ಅಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು, ಸ್ಥಳೀಯ ಶಾಲಾ ಮುಖ್ಯ ಶಿಕ್ಷಕರು ಸ್ಥಳಕ್ಕೆ ಭೇಟಿ ನೀಡಿದಾಗ 20 ವರ್ಷದ ಬಾಲಕನಿಗೆ ಮತ್ತು ಅಪ್ರಾಪ್ತ ಬಾಲಕಿಗೆ ಬಾಲ್ಯ ವಿವಾಹವಾಗಿರುವುದು ತಿಳಿದು ಬಂದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಚೈಲ್ಡ್ ಲೈನ್ 1098 ಜಿಲ್ಲಾ ಸಂಯೋಜಕ ದೀಕ್ಷಿತ್ ಅಚ್ರಪ್ಪಾಡಿ, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆ ಅನ್ವಯ ಅಧಿಕಾರಿಗಳು ಬಾಲಕನ ಮತ್ತು ಬಾಲಕಿಯ ಪೋಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದ್ದು ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುತ್ತಿರುವ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣಗಳು ಈವಾಗಲೂ ನಡೆಯುತ್ತಿದೆ. ಎಂಬುವುದು ಯಾರು ನಂಬಲು ಅಸಾಧ್ಯವಾಗಿರುವ ವಿಷಯ, ಸಾರ್ವಜನಿಕರಿಗೆ ಬಾಲ್ಯವಿವಾಹ ನಿಷೇದ ಕಾಯ್ದೆಯ ಕುರಿತು ಮಾಹಿತಿಯಿದ್ದರೂ ಬಾಲ್ಯವಿವಾಹ ಪ್ರಕರಣಗಳ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚುತ್ತಿದೆ, ಬಾಲ್ಯವಿವಾಹ ಪ್ರಕರಣಗಳು ಬಂದಾಗ ಬಾಲ್ಯವಿವಾಹ ನಿಷೇಧದಿಕಾರಿಗಳು ಮುಲಾಜಿಲ್ಲದೇ ತಪ್ಪಿತಸ್ಥರ ಮೇಲೆ ಪ್ರಕರಣದ ದಾಖಲಿಸಿದಲ್ಲಿ ಬಾಲ್ಯವಿವಾಹ ನಿಯಂತ್ರಿಸಲು ಸಾದ್ಯ, ಈ ಒಂದು ಪ್ರಕರಣದಲ್ಲಿ ಇಲಾಖೆಗಳು ಉತ್ತಮ ಸಹಕಾರ ನೀಡಿದೆ ಎಂದರು.