ಉಪ್ಪಿನಂಗಡಿ: ಭಾರತದ ಪ್ರಮುಖ ನಗರಗಳಲ್ಲಿ ದಸರಾ ವೇಳೆಗೆ ಸ್ಫೋಟಕ್ಕೆ ಸಂಚು ರೂಪಿಸಿದ ಆರೋಪದ ಮೇರೆಗೆ ಉತ್ತರಭಾರತದಲ್ಲಿ ಇತ್ತೀಚೆಗೆ ದೆಹಲಿ ಪೊಲೀಸ್ ವಿಶೇಷ ಸೆಲ್ ಬಂಧಿಸಿರುವ 6 ಮಂದಿ ಶಂಕಿತ ಉಗ್ರರಲ್ಲಿ , ಉಪ್ಪಿನಂಗಡಿಯಲ್ಲಿ ನೆಲೆಸಿದ್ದ, ಕೆಲ ತಿಂಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೂ ಸೇರಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಸ್ಥಳೀಯರಿಗೆ ರಫೀಕ್ ಖಾನ್ (45) ಎಂದು ಪರಿಚಯಿಸಿಕೊಂಡಿದ್ದ ಈತ ಮೂಲತಃ ಉತ್ತರಪ್ರದೇಶದವನು ಆಗಿದ್ದು, ಇಲ್ಲಿನ ಸ್ಥಳೀಯ ಯುವತಿಯನ್ನು 2019 ರಲ್ಲಿ ವಿವಾಹವಾಗಿ ಇಲ್ಲೇ ವಾಸವಿದ್ದ. ಗ್ಯಾರೇಜ್ ನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಈತ ಸ್ಥಳೀಯರ ಸ್ನೇಹ ಬೆಳೆಸಿ ನಂಬಿಕೆ ಗಳಿಸಿಕೊಂಡಿದ್ದ. ಆದರೆ ಜು.17 ರಂದು ಈತ ಬೆಂಗಳೂರಿಗೆ ಕೆಲಸ ಮೇರೆ ಹೋಗಿ ಬರುವುದಾಗಿ ತಿಳಿಸಿ ನಾಪತ್ತೆಯಾಗಿದ್ದ.
ನಾಪತ್ತೆಯಾದ ರಫೀಕ್ ಖಾನ್
ನಾಪತ್ತೆಯಾಗಿರುವ ಬಗ್ಗೆ ಈತನ ಪತ್ನಿ ಉಪ್ಪಿನಂಗಡಿ ಪೊಲೀಸರಿಗೆ ದೂರು ಸಲ್ಲಿಸಿದ್ದರು.