ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಬರಿಮಾರು ಗ್ರಾಮದ ಕಲ್ಲೆಟ್ಟಿಯ ನಿರ್ಗತಿಕ ಮಹಿಳೆ ಗುಲಾಬಿ ಯವರ ಮನೆಯ ಸುತ್ತ ಮುತ್ತ ಸ್ವಚ್ಛತಾ ಕಾರ್ಯವನ್ನು ಬರಿಮಾರು ಒಕ್ಕೂಟದ ಕಾನಲ್ತಾಯ ಮಹಾಕಾಳಿ ಸ್ವ- ಸಹಾಯ ಸಂಘ , ಶ್ರೀ ಮಂಜುನಾಥ ಮತ್ತು ಶ್ರೀಮಾತಾ ಪ್ರಗತಿಬಂಧು ಗುಂಪುಗಳ ಸದಸ್ಯರು ನಿರ್ವಹಿಸಿದರು.

ಈ ಸಂದರ್ಭದಲ್ಲಿ ತರಬೇತಿ ಸಹಾಯಕಿ ಪಂಚಾಯತ್ ಸದಸ್ಯೆ ಪುಷ್ಪಲತಾ , ಸೇವಾಪ್ರತಿನಿಧಿ ಶ್ರೀಮತಿ ಗೀತಾ, ಮಾಣಿ ವಲಯ ಮೇಲ್ವಿಚಾರಕಿ ಶ್ರೀಮತಿ ಪ್ರೇಮಾ ಹಾಗೂ ಸದಸ್ಯರು ಉಪಸ್ಥಿತರಿದ್ದರು.