ಉಪ್ಪಿನಂಗಡಿ: ಇಲ್ಲಿನ ರಾಮಕುಂಜದ ಶ್ರೀ ರಾಮಕುಂಜೇಶ್ವರ ವಿದ್ಯಾರ್ಥಿ ನಿಲಯದಲ್ಲಿದ್ದ ವಿದ್ಯಾರ್ಥಿಯೋರ್ವ ಮನೆಗೆ ಹೋಗುವುದಾಗಿ ಹೇಳಿ ನಾಪತ್ತೆಯಾದ ಘಟನೆ ವರದಿಯಾಗಿದೆ.
ವಿದ್ಯಾರ್ಥಿ ನಾಪತ್ತೆಯಾಗಿರುವ ಬಗ್ಗೆ ವಸತಿ ನಿಲಯದ ಮ್ಯಾನೇಜರ್ ರಮೇಶ್ ಅವರು ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸೆ. 21 ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಕಾಲೇಜಿಗೆ ಹೋಗುವುದಾಗಿ ತಿಳಿಸಿ ಅಂಜನ್ ವಿದ್ಯಾರ್ಥಿ ನಿಲಯ ಬಿಟ್ಟು ತೆರಳಿದ್ದಾನೆ. ಮದ್ಯಾಹ್ನ 12-40 ಗಂಟೆ ಸುಮಾರಿಗೆ ಇತರ ಕಾಲೇಜು ವಿದ್ಯಾರ್ಥಿಗಳು ಊಟಕ್ಕೆ ವಸತಿ ನಿಲಯಕ್ಕೆ ಆಗಮಿಸಿದ್ದಾರೆ. ಈ ವೇಳೆ ಅಂಜನ್ ಕಾಲೇಜಿಗೆ ಹೋಗದಿರುವ ವಿಚಾರ ವಿದ್ಯಾರ್ಥಿಗಳಿಂದ ರಮೇಶ್ ರವರಿಗೆ ತಿಳಿದು ಬಂದಿದೆ.
ಈ ವಿಚಾರದ ಬಗ್ಗೆ ಕಾಲೇಜಿನ ಪ್ರಾಂಶುಪಾಲರಲ್ಲಿ ವಿಚಾರಿಸಿದಾಗ ಅಂಚನ್ ಕಾಲೇಜಿಗೆ ಬಾರದೇ ಇರುವ ವಿಚಾರವನ್ನು ಪ್ರಾಂಶುಪಾಲರು ಮ್ಯಾನೇಜರ್ ರಮೇಶ್ ಅವರಿಗೆ ತಿಳಿಸಿದ್ದಾರೆ. ನಂತರ ಅಂಜನ್ ರವರ ಸ್ವಂತ ವಿಳಾಸವಾದ ಸಿಂಚನಾ ಬ್ಯೂಟಿ ಪಾರ್ಲರ್ , ಮಾರಿಗುಡ್ಡನ ಹಳ್ಳಿ ಕಲ್ಯಾಣ ನಗರ ಚಿಕ್ಕಮಗಳೂರು ಎಂಬಲ್ಲಿರುವ ಆತನ ಪೋಷಕರಲ್ಲಿ ದೂರವಾಣಿ ಮುಖಾಂತರ ವಿಚಾರಿಸಿದ್ದಾರೆ. ವಿದ್ಯಾರ್ಥಿ ಅಂಜನ್ ಮನೆಗೆ ಬಂದಿಲ್ಲವೆಂದು ಆತನ ಪೋಷಕರು ಮಾಹಿತಿ ನೀಡಿದ್ದಾರೆ. ತಿಳಿಸಿದ್ದಾರೆ.
ವಿದ್ಯಾರ್ಥಿಗಾಗಿ ವಸತಿ ನಿಲಯದ ಸಿಬ್ಬಂದಿಗಳು ಸ್ಥಳೀಯವಾಗಿ ಎಲ್ಲಾ ಕಡೆ ಹುಡುಕಾಡಿದ್ದು ಎಲ್ಲಿಯೂ ಪತ್ತೆಯಾಗಿರಲಿಲ್ಲ. ಈ ಹಿನ್ನಲೆಯಲ್ಲಿ ಅಂಜನ್ ಸಿ,ಎಮ್ ಯಾರಿಗೂ ತಿಳಿಸದೇ ವಸತಿ ನಿಲಯಕ್ಕೂ ಬಾರದೇ ಸ್ವಂತ ಮನೆಗೂ ಹೋಗದೇ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿದ್ದು ಯಾರೋ ಅಪಹರಿಸಿರಬಹುದು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.