ಪುತ್ತೂರು: ಕುಡಿದ ಮತ್ತಿನಲ್ಲಿ ಕಟ್ಟಡ ಮೇಲೆ ಹತ್ತಿದ ವ್ಯಕ್ತಿ ಹೈ ಡ್ರಾಮಾ ಸೃಷ್ಟಿಸಿದ ಘಟನೆ ಪುತ್ತೂರಿನ ಎಪಿಎಂಸಿ ರಸ್ತೆಯ ಕಟ್ಟಡದಲ್ಲಿ ಸೆ.21 ರಂದು ಸಂಜೆ ನಡೆದಿದೆ.
ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೋರ್ವ ಸಂಜೆ ವೇಳೆ ಕಟ್ಟಡದ ಮೇಲೆ ಹತ್ತಿ ಒಂದು ಗಂಟೆಗೂ ಹೆಚ್ಚು ಹೊತ್ತು ಅಲ್ಲೇ ನಿಂತಿದ್ದ, ಅಷ್ಟೇ ಅಲ್ಲದೆ ಆತ್ಮಹತ್ಯೆಗೂ ಯತ್ನಿಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ವ್ಯಕ್ತಿಯನ್ನು ಸರ್ವೆ ನಿವಾಸಿ ಎಂದು ಗುರುತಿಸಲಾಗಿದೆ.
ಕುಡಿದ ಮತ್ತಿನಲ್ಲಿದ್ದ ವ್ಯಕ್ತಿ ಸಂಜೆ ವೇಳೆ ಕಟ್ಟಡದ ಮೇಲೆ ಹತ್ತಿ ಒಂದು ಗಂಟೆಗೂ ಹೆಚ್ಚು ಹೊತ್ತು ಅಲ್ಲೇ ಇದ್ದು, ಇದನ್ನು ಗಮನಿಸಿದ ಸಾರ್ವಜನಿಕರು ಆತನನ್ನು ವಿಚಾರಣೆ ನಡೆಸಿದಾಗ ಯಾವುದೇ ಸರಿಯಾದ ಮಾಹಿತಿ ನೀಡದೆ ಇದ್ದ ಕಾರಣ ಸಾರ್ವಜನಿಕರು ಹಾಗೂ ಕಟ್ಟಡ ದಲ್ಲಿರುವವರು ಪೊಲೀಸರಿಗೆ ಕರೆ ಮಾಡಿದ್ದು, ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆತ ಇದಕ್ಕಿಂತಲೂ ಮೊದಲು ಎರಡು, ಮೂರು ಬಾರಿ ಇಲ್ಲಿಗೆ ಬಂದಿದ್ದ ಎಂದು ಕೆಲವು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಪೊಲೀಸರು ಆಗಮಿಸುತ್ತಿದಂತೆ ಆತ ಅವರಲ್ಲಿ ನಾನು ನನ್ನ ಮೊಬೈಲ್ ನಲ್ಲಿ ಮಾತನಾಡಿಕೊಂಡು ಇಲ್ಲಿಗೆ ಬಂದೆ ಅಷ್ಟೇ ಮಾತನಾಡುತ್ತಾ ಇಲ್ಲಿಗೆ ಬಂದ ವಿಚಾರ ನನಗೆ ತಿಳಿಯಲೇ ಇಲ್ಲ ಎಂದು ಹೇಳಿದ್ದಾನೆ. ಆತನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆಗಾಗಿ ಠಾಣೆಗೆ ಕರೆದೊಯ್ಯಿದಿದ್ದಾರೆ ಎಂದು ತಿಳಿದು ಬಂದಿದೆ.
ಕೌಟುಂಬಿಕ ಕಲಹ…!!!
ವ್ಯಕ್ತಿಯು ಕೆಲ ದಿನಗಳಿಂದ ವೈಯಕ್ತಿಕ ಹಾಗೂ ಕೌಟುಂಬಿಕ ವಿಚಾರದಿಂದ ಮನ ನೊಂದಿದ್ದು ಈ ಕಾರಣದಿಂದ ವಿಪರೀತ ಕುಡಿದು ಆತ್ಮಹತ್ಯೆಗೂ ಯತ್ನಿಸಿದ್ದ ಎಂದು ತಿಳಿದು ಬಂದಿದೆ.