ಪುತ್ತೂರು: ವಿವಿಧ ಫೈನಾನ್ಸ್ ಗಳ ಹೆಸರಿನಲ್ಲಿ ಕರೆ ಮಾಡುವಂತೆ ಸಂದೇಶ ಕಳುಹಿಸಿ, ಕರೆ ಮಾಡಿದಾಗ ಕಡಿಮೆ ಬಡ್ಡಿದರದಲ್ಲಿ ಲೋನ್ ನೀಡುವುದಾಗಿ ಹೇಳಿ ವ್ಯಕ್ತಿಯಿಂದ ವೈಯಕ್ತಿಕ ದಾಖಲೆಗಳನ್ನು ಪಡೆದುಕೊಂಡು ನಂತರ ರಿಜಿಸ್ಟ್ರೇಷನ್ ಚಾರ್ಜ್, ಜಿ ಎಸ್ ಟಿ ಮತ್ತು ವಿವಿಧ ಚಾರ್ಜಸ್ ಗಳಿಗಾಗಿ ಲಕ್ಷಾಂತರ ಹಣ ಪಡೆದುಕೊಂಡು ವಂಚಿಸಿದ ಘಟನೆ ರಾಮಕುಂಜ ಬಾರೆಂಬಾಡಿ ಬದಿಲ ದಲ್ಲಿ ನಡೆದಿದೆ.
ವಂಚನೆಗೊಳಗಾದವರನ್ನು ರಾಮಕುಂಜ ಬಾರೆಂಬಾಡಿ ಬದಿಲ ನಿವಾಸಿ ಮಹಮ್ಮದ್ ನಜೀರ್ ಎಂದು ಗುರುತಿಸಲಾಗಿದೆ.
ನಜೀರ್ ರವರ ಮೊಬೈಲ್ ಫೋನ್ ಗೆ ಲೋನ್ ಅಪ್ಲೈಗಾಗಿ ಕ್ಯಾಪಿಟಲ್ ಇಂಡಿಯಾ ಫೈನಾನ್ಸ್ ಲಿಮಿಟೆಡ್ ಗೆ ಕರೆ ಮಾಡುವಂತೆ ಸಂದೇಶವೊಂದು ಬಂದಿದ್ದು, ಆ ನಂಬರಿಗೆ ಕರೆ ಮಾಡಿದಾಗ 5% ಬಡ್ಡಿಯಲ್ಲಿ 5 ಲಕ್ಷ ಸಾಲ ನೀಡುವುದಾಗಿ ಹೇಳಿದ್ದು, ಅದಕ್ಕಾಗಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಫೋಟೋ ಕಳುಹಿಸುವಂತೆ ಹೇಳಿದ್ದು, ನಜೀರ್ ಕಳುಹಿಸಿರುತ್ತಾರೆ. ನಂತರ ವಿವಿಧ ಮೊಬೈಲ್ ನಂಬರ್ ಗಳಿಂದ ಕರೆ ಮಾಡಿ ರಿಜಿಸ್ಟ್ರೇಷನ್ ಚಾರ್ಜ್, ಜಿ ಎಸ್ ಟಿ ಮತ್ತು ವಿವಿಧ ಚಾರ್ಜಸ್ ಗಳಿಗಾಗಿ ಹಣ ಕಳುಹಿಸುವಂತೆ ಹೇಳಿ ಹಂತ ಹಂತವಾಗಿ 5,20,727 ಲಕ್ಷ ರೂ. ಅನ್ನು ಅವರ ಬ್ಯಾಂಕ್ ಖಾತೆಗೆ ಜಮಾಯಿಸಿಕೊಂಡಿದ್ದಾರೆ.
ಈ ಮಧ್ಯೆ ಬಜಾಜ್ ಫೈನ್ಸೆರ್ವ್ ರವರು ಸಂದೇಶ ಕಳುಹಿಸಿ ಮೊಬೈಲ್ ನಂಬರ್ ಗೆ ಕರೆ ಮಾಡುವಂತೆ ಹೇಳಿದ್ದು, ನಜೀರ್ ಕರೆ ಮಾಡಿದಾಗ 5% ಬಡ್ಡಿಯಲ್ಲಿ 9 ಲಕ್ಷ ರೂ. ಸಾಲ ನೀಡುವುದಾಗಿ ಹೇಳಿದ್ದು,ಅದಕ್ಕಾಗಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಫೋಟೋ ಕಳುಹಿಸುವಂತೆ ಹೇಳಿದ್ದು, ನಜೀರ್ ಕಳುಹಿಸಿರುತ್ತಾರೆ. ನಂತರ ವಿವಿಧ ಮೊಬೈಲ್ ನಂಬರ್ ಗಳಿಂದ ಕರೆ ಮಾಡಿ ರಿಜಿಸ್ಟ್ರೇಷನ್ ಚಾರ್ಜ್, ಜಿ ಎಸ್ ಟಿ ಮತ್ತು ವಿವಿಧ ಚಾರ್ಜಸ್ ಗಳಿಗಾಗಿ ಹಣ ಕಳುಹಿಸುವಂತೆ ಹೇಳಿ ಹಂತ ಹಂತವಾಗಿ 2,03,598 ಲಕ್ಷ ರೂ. ಅನ್ನು ಅವರು ಕಳುಹಿಸಿದ ಬ್ಯಾಂಕ್ ಖಾತೆಗೆ ಜಮಾವಣೆ ಮಾಡಿದ್ದು, ಈ ರೀತಿಯಾಗಿ ನಜೀರ್ ಅವರಿಂದ ಎರಡು ಹಂತವಾಗಿ ಒಟ್ಟು 7,24,325 ರೂ. ಹಣವನ್ನು ಪಡೆದು ವಂಚನೆ ಮಾಡಿದ್ದಾಗಿ ಆರೋಪಿಸಿ ನಜೀರ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ ಅ.ಕ್ರ.36/2021 ಕಲಂ.419,420 ಐಪಿಸಿ ಮತ್ತು ಕಲಂ.66(ಡಿ), 66(ಸಿ) ಐ.ಟಿ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.