ಪುತ್ತೂರು: ದರ್ಬೆ ಬಳಿ ಪಾದಚಾರಿಗೆ ಲಾರಿ ಡಿಕ್ಕಿ ಹೊಡೆದು ಪಾದಚಾರಿ ವ್ಯಕ್ತಿಗೆ ತಲೆಯ ಭಾಗಕ್ಕೆ ಗಾಯವಾದ ಘಟನೆ ವರದಿಯಾಗಿದೆ.
ಗಾಯಗೊಂಡ ವ್ಯಕ್ತಿಯನ್ನು ಶರತ್ ಎಂದು ಗುರುತಿಸಲಾಗಿದ್ದು, ವಿಳಾಸ ಗುರುತು ಪತ್ತೆಯಾಗಿಲ್ಲ.
ಗಾಯಗೊಂಡ ವ್ಯಕ್ತಿಯನ್ನು ಸಾರ್ವಜನಿಕರು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದರಾದರು ವ್ಯಕ್ತಿ ಪ್ರಥಮ ಚಿಕಿತ್ಸೆ ಪಡೆದು ತುಸು ಹೊತ್ತಲ್ಲೇ ಬ್ಯಾಂಡೇಜ್ ಆಸ್ಪತ್ರೆಯ ಹೊರ ಭಾಗ ಕಿತ್ತೆಸೆದು ಪರಾರಿಯಾಗಿದ್ದಾನೆ.
ಕುಡಿದ ನಶೆಯಲ್ಲಿದ್ದ …!!?
ಇನ್ನು ಅಪಘಾತಕ್ಕೆ ಒಳಗಾದ ಪಾದಚಾರಿ ವ್ಯಕ್ತಿ ವಿಪರೀತ ಕುಡಿದಿದ್ದ ಇದರಿಂದಾಗಿ ಅಮಲಿನಲ್ಲಿ ಈ ಘಟನೆ ನಡೆದಿದೆ ಎಂದು ಘಟನೆ ನಡೆದ ಸ್ಥಳದಲ್ಲಿ ಇದ್ದ ಸಾರ್ವಜನಿಕರು ಹಾಗೂ ಆಸ್ಪತ್ರೆಯ ಬಳಿ ಈತನ ನಡತೆಯನ್ನು ಕಂಡ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.