ಬೆಳ್ತಂಗಡಿ: ಸೇವಾಭಾರತಿ ಇದರ ಸೇವಾಧಾಮದ ವತಿಯಿಂದ ಬೆಳ್ತಂಗಡಿ ತಾಲೂಕಿನ ಎಮ್. ಆರ್. ಡಬ್ಲ್ಯೂ ಮತ್ತು ಯೂ. ಆರ್. ಡಬ್ಲ್ಯೂ ಹಾಗೂ ವಿ. ಆರ್. ಡಬ್ಲ್ಯೂ ಇವರಿಗೆ ವಿಕಲ ಚೇತನರ ಮತ್ತು ಹಿರಿಯ ನಾಗರಿಕರ ನೋಡಲ್ ಅಧಿಕಾರಿಯವರ ಉಪಸ್ಥಿತಿಯಲ್ಲಿ ಬೆಳ್ತಂಗಡಿ ತಾಲೂಕು ಪಂಚಾಯತ್ ನಲ್ಲಿ ಬೆನ್ನುಹುರಿ ಅಪಘಾತ ಮತ್ತು ದ್ವಿತೀಯಾಂತರ ಸಮಸ್ಯೆಯ ಬಗ್ಗೆ ಸೇವಾಭಾರತಿಯ ಅಧ್ಯಕ್ಷರು ಹಾಗೂ ಸೇವಾಧಾಮದ ಸಂಸ್ಥಾಪಕರಾದ ಕೆ. ವಿನಾಯಕ ರಾವ್ ಮಾಹಿತಿ ನೀಡಿದರು.
ಜಾಗೃತಿ ಕಾರ್ಯಕ್ರಮದಲ್ಲಿ ಒಟ್ಟು 35 ಮಂದಿ ಭಾಗವಹಿಸಿದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ ಕ್ಷೇತ್ರ ಸಂಯೋಜಕರಾದ ಅಖಿಲೇಶ್. ಎ ಇವರು ಉಪಸ್ಥಿತರಿದ್ದರು. ವಿ.ಆರ್.ಡಬ್ಲ್ಯೂ ಜೋಸೆಫ್ ಇಂದಬೆಟ್ಟು ಸ್ವಾಗತಿಸಿ, ನಿರೂಪಿಸಿದರು. ಎಮ್. ಆರ್. ಡಬ್ಲ್ಯೂ ಜೋನ್ ಡಿ ಸೋಜಾರವರು ಧನ್ಯವಾದಗೈದರು.