ವಿಟ್ಲ: ಕೇಪು ಗ್ರಾಮ ಪಂಚಾಯತ್ ನ ಸಂಗಮ ಸಂಜೀವಿನಿ ಒಕ್ಕೂಟದ ಉತ್ಪನ್ನಗಳಾದ ಪಿನಾಯಿಲ್, ಸೋಪ್ ಆಯಿಲ್, ಬಾರ್ ಸೋಪ್, ಟಾಯ್ಲೆಟ್ ಕಿನ್ಲರ್ ಗಳ ಮಾರುಕಟ್ಟೆ ಬಿಡುಗಡೆ ಕಾರ್ಯಕ್ರಮವು ಕೇಪು ಪಂಚಾಯತ್ ನ ಸಭಾಭವನದಲ್ಲಿ ನಡೆಯಿತು.
ತಾಲೂಕು ಕಾರ್ಯ ನಿರ್ವಹಣೆ ಅಧಿಕಾರಿ ರಾಜಣ್ಣ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಈ ಸಭೆಯ ಅಧ್ಯಕ್ಷತೆಯನ್ನು ಕೇಪು ಪಂಚಾಯತ್ ಅಧ್ಯಕ್ಷರಾದ ಯಶಸ್ವಿನಿ ಶಾಸ್ತ್ರೀ ನೆಕ್ಕರೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ರಾದ ಜಯಶ್ರೀ ಕೊಡಂದೂರು, ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಪಂಚಾಯತ್ ಸದಸ್ಯರಾದ ಜಗಜ್ಜೀವನ್ ರಾಮ್ ಶೆಟ್ಟಿ, ಪುರುಷೋತ್ತಮ ಗೌಡ ಕಲ್ಲಂಗಳ . ಟಿಪಿಎಮ್ ಸುಧಾ ಹಾಗೂ ಒಕ್ಕೂಟದ ಅಧ್ಯಕ್ಷರಾದ ಶಶಿಕಲಾ ಖಂಡಿಗ ಹಾಗೂ ಮತ್ತಿತರರು ಉಪಸ್ಥಿತರಿದ್ದರು.