ಪುತ್ತೂರು ತಾಲೂಕಿನ ಕುರಿಯ ಗ್ರಾಮದ ಶಿಬರಾಡಿಯ ಸ್ವಾತಿ ಪೂಜಾರಿ ಯವರು ಅನಾರೋಗ್ಯ ಸಮಸ್ಯೆಗೆ ಒಳಗಾಗಿದ್ದು, ಮೊದಲು ಹೊಟ್ಟೆ ನೋವು ಕಾಣಿಸಿಕೊಂಡಿದ್ದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ದೇರಳಕಟ್ಟೆ ಕೆಎಸ್ ಹೆಗ್ಡೆ ಆಸ್ಪತ್ರೆ ಯಲ್ಲಿ ದಾಖಲಿಸಿ ವೈದ್ಯರು ಪರಿಶೀಲಿಸಿ ಕರಳಿನ ಒಂದು ಭಾಗ ತೂತಗಿದ್ದು ಹೆಚ್ಚಿನ ಚಿಕಿತ್ಸೆ ಮಾಡಬೇಕಾಗಿದೆ. ಹೆಚ್ಚಿನ ಚಿಕಿತ್ಸೆಗೆ ಸುಮಾರು 4 ಲಕ್ಷ ವೆಚ್ಚವಾಗಲಿದೆ ಎಂದು ತಿಳಿಸಿದ್ದಾರೆ.
ಈವರೆಗೆ ಒಂದು ಲಕ್ಷ ರೂ. ಆಸ್ಪತ್ರೆಗೆ ಖರ್ಚು ಮಾಡಿದ್ದು, ಈಗ ದಿಕ್ಕು ತೋಚದಂತಾಗಿದೆ. ಆರ್ಥಿಕವಾಗಿ ತೀರಾ ಹಿಂದುಳಿದಿರುವ ಕುಟುಂಬಕ್ಕೆ ಈಗ ದಿಕ್ಕು ತೋಚಾದಂತಾಗಿದೆ. ತಂದೆ ತಾಯಿ ಕೂಲಿ ಕೆಲಸ ಮಾಡಿಕೊಂಡಿದ್ದು, ಅಣ್ಣ ಡ್ರೈವರ್ ಕೆಲಸ ನಿರ್ವಹಿಸುತ್ತಿದ್ದು ಕೊರೊನಾದಿಂದಾಗಿ ಕೆಲಸವು ಸರಿಯಾದ ರೀತಿಯಲ್ಲಿ ದೊರಕದೆ ಇರುವುದರಿಂದ ಈ ಕುಟುಂಬವು ತೀರಾ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಚಿಕಿತ್ಸೆಗೆ ಸುಮಾರು 4 ಲಕ್ಷ ರೂ. ವೆಚ್ಚವಾಗಲಿದ್ದು, ಈಗಾಗಲೇ ಸಂಕಷ್ಟದಲ್ಲಿರುವ ಕುಟುಂಬ ಸುಮಾರು 1 ಲಕ್ಷ ರೂ. ಯನ್ನು ಪಾವತಿಸಿದ್ದಾರೆ. ಮುಂದಿನ ವೆಚ್ಚವನ್ನು ಭರಿಸುವುದಕ್ಕೆ ಇವರಿಗೆ ಯಾವುದೇ ದಾರಿ ತೋಚದಂತಾಗಿದೆ.
ಸ್ವಾತಿ ಯವರದ್ದು ತೀರಾ ಬಡತನದ ಕುಟುಂಬವಾಗಿದೆ. ಒಂದು ವರ್ಷದ ಹಿಂದೆಯಷ್ಟೇ ಸ್ವಾತಿಯವರ ಗಂಡ ಅಕಾಲಿಕವಾಗಿ ಸಾವನ್ನಪ್ಪಿದ್ದು, ಈಗ ಅವರು ತವರು ಮನೆಯಲ್ಲಿದ್ದು, ಟೈಲರಿಂಗ್ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಈ ಸಂದರ್ಭದಲ್ಲಿ ಅವರಿಗೆ ಆರೋಗ್ಯ ಸಮಸ್ಯೆ ಉಂಟಾಗಿದ್ದು, ಮೊದಲೇ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಇದು ಬರಸಿಡಿಲು ಬಡಿದಂತಾಗಿದೆ. ಆರ್ಥಿಕ ಭದ್ರತೆ ಇಲ್ಲದೆ ಇರುವುದರಿಂದ ಈ ಕುಟುಂಬ ದಾನಿಗಳ ನೆರವಿನ ಹಸ್ತಕ್ಕಾಗಿ ವಿನಂತಿಸಿಕೊಂಡಿದ್ದಾರೆ.
ಸಹಾಯದ ನಿರೀಕ್ಷೆಯಲ್ಲಿ..
SWATHI POOJARI
- ACCOUNT SWATHI .S.- 19620100032717
- IFSC FDRL0001962
- BRANCH:Moodabidre
- BANK: Federal bank
Google pay:
9972212505
ಹೆಚ್ಚಿನ ಮಾಹಿತಿಗಾಗಿ: +919611943504, +918431230513, +918867777771