ಪುತ್ತೂರು: ನಗರ ಸಭಾ ವ್ಯಾಪ್ತಿಯ ಬನ್ನೂರು ವಾರ್ಡ್ ನಂಬರ್ 05ರ ಎಂ.ಆರ್ ಗಾರ್ಬಲ್ ರಸ್ತೆ ಹಾಗೂ ಲಕ್ಕಿಸ್ಟಾರ್ ಕಂಪೌಂಡ್ ಬಳಿಯ ಇಂಟರ್ ಲಾಕ್ ರಸ್ತೆಯ ಉದ್ಘಾಟನಾ ಕಾರ್ಯವು ಸ.26 ರಂದು ನಡೆಯಿತು.
ಎಂ.ಆರ್ ರಸ್ತೆಯನ್ನು ನಗರಸಭಾ ಅಧ್ಯಕ್ಷರಾದ ಜೀವಂಧರ್ ಜೈನ್ ಉದ್ಘಾಟಿಸಿದರು.ಲಕ್ಕಿಸ್ಟಾರ್ ರಸ್ತೆಯನ್ನು ಸ್ಥಳೀಯ ವಾರ್ಡಿನ ನಗರ ಸಭಾ ಸದಸ್ಯೆ ಕೆ. ಫಾತಿಮತ್ ಝೋರಾ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್, ಕ್ಷೇತ್ರ ಸಮಿತಿ ಸದಸ್ಯರಾದ ಕೆ.ಎ ಸಿದ್ದೀಕ್. ಪಿಬಿಕೆ ಮೊಹಮ್ಮದ್, ನಗರ ಸಮಿತಿ ಅಧ್ಯಕ್ಷ ಸಿರಾಜ್ ಕೂರ್ನಡ್ಕ, ಕಾರ್ಯದರ್ಶಿ ಜುನೈದ್ ಸಾಲ್ಮರ, ಪಕ್ಷದ ಕಾರ್ಯಕರ್ತರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.