ಬೆಳ್ತಂಗಡಿ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಇದರ ಮಾರ್ಗದರ್ಶನದಲ್ಲಿ ವಾಣಿ ವಿದ್ಯಾ ಸಂಸ್ಥೆ ಹಾಗೂ ಆಕ್ಟ್ ಇಂಡಿಯಾ ಫೌಂಡೇಶನ್ ಇದರ ಸಹಯೋಗದಲ್ಲಿ ಶ್ರಮಿಕ ಬೃಹತ್ ‘ಉದ್ಯೋಗ ಮೇಳ’ ವು ಜ.22 ರಂದು ವಾಣಿ ವಿದ್ಯಾಸಂಸ್ಥೆ ಹಳೆಕೋಟೆ, ಬೆಳ್ತಂಗಡಿಯಲ್ಲಿ ನಡೆಯಲಿದೆ.
ಪಿಯುಸಿ, ಪದವಿ, ಐಟಿಐ, ಡಿಪ್ಲೋಮಾ ಇಂಜಿನಿಯರಿಂಗ್ ಉತ್ತೀರ್ಣಗೊಂಡ ವಿದ್ಯಾರ್ಥಿಗಳು, ವೃತ್ತಿಪರ ಶಿಕ್ಷಣ ಮುಗಿಸಿದ ಎಲ್ಲಾ ಅಭ್ಯರ್ಥಿಗಳು ನೋಂದಾವಣೆ ನಡೆಸಿ ಉದ್ಯೋಗಮೇಳಕ್ಕೆ ಹಾಜರಾಗಬಹುದು.
ಅಭ್ಯರ್ಥಿಗಳು ಆಧಾರ್ ಕಾರ್ಡ್, ಶೈಕ್ಷಣಿಕ ದಾಖಲೆ ಹಾಗೂ ವ್ಯಾಸಂಗ ವಿವರ C.V/ Resume ಇದರ ಕನಿಷ್ಠ ಐದು ಪ್ರತಿಗಳನ್ನು ಸಂದರ್ಶನದ ವೇಳೆ ತೆಗೆದುಕೊಂಡು ಬರಬೇಕು. ಉದ್ಯೋಗ ಮೇಳದಲ್ಲಿ ಭಾಗವಹಿಸಲು ಯಾವುದೇ ಶುಲ್ಕವಿರುವುದಿಲ್ಲ. ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸಬೇಕು. ಅ.15 ರ ನಂತರ ನೋಂದಾವಣೆ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
