ಪುತ್ತೂರು: ಸುಮಾರು 26 ವರ್ಷಗಳ ಹಿಂದೆ ಸಾಲ್ಮರದಲ್ಲಿ ನಿವೃತ್ತ ತಹಸೀಲ್ದಾರ್ ಲಿಂಗಪ್ಪ ಗೌಡ ಅವರ ಮನೆಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಜೊಡ್ ಸನ್ ಎಂದು ಗುರುತಿಸಲಾಗಿದೆ.

ಸುಮಾರು 26 ವರ್ಷಗಳಿಂದ ಸಾಲ್ಮರದಲ್ಲಿ ನಿವೃತ್ತ ತಹಸೀಲ್ದಾರ್ ಲಿಂಗಪ್ಪ ಗೌಡ ಅವರ ಮನೆಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಜೊಡ್ ಸನ್ ತಲೆಮರೆಸಿಕೊಂಡಿದ್ದು, ಆತನ ಇರುವಿಕೆ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಕೇರಳದ ಎರ್ನಾಕುಲಂ ವರುಪುಝು ಪುತ್ತನ್ ಪಲ್ಲಿ ಕೈತಡ್ಕ ಚಾಲಿ ಎಂಬಲ್ಲಿ ವಶಕ್ಕೆ ಪಡೆದಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಾರ್ಯಾಚರಣೆಯಲ್ಲಿ ಪುತ್ತೂರು ನಗರ ಠಾಣಾ ಎ.ಎಸ್.ಐ ಚಂದ್ರ, ಹೆಚ್.ಸಿ ಪರಮೇಶ್ವರ ಮತ್ತು ಹೆಚ್.ಸಿ ಜಗದೀಶ್ ಪಾಲ್ಗೊಂಡಿದ್ದರು.



























