ಪುತ್ತೂರು: ರೋಟರಿ ಕ್ಲಬ್ ವತಿಯಿಂದ ವಿಶ್ವ ಹೃದಯ ದಿನವಾದ ಸೆ.29ರ ದಿನವನ್ನು ಒಂದು ರಾಷ್ಟ್ರ- ಒಂದು ದಿನ- ಒಂದು ಮಿಲಿಯನ್ ತಪಾಸಣೆ ಎಂಬ ಘೋಷವಾಕ್ಯದೊಂದಿಗೆ ಮಧುಮೇಹವನ್ನು ಸೋಲಿಸುವ ಅಭಿಯಾನ ನಡೆಯಲಿದೆ.
ಭಾರತದಲ್ಲಿರುವ ಸುಮಾರು 4216 ರೋಟರಿ ಕ್ಲಬ್ ಗಳು ಸೇರಿ ಒಂದು ದಿನದಲ್ಲಿ ಒಂದು ಮಿಲಿಯನ್ ಜನರ ಮಧುಮೇಹ ತಪಾಸಣೆಯ ಬೃಹತ್ ಗುರಿಯನ್ನು ಹೊಂದಿಕೊಂಡಿದೆ. ಹಾಗೂ ಬೃಹತ್ ಮಧುಮೇಹ ತಪಾಸಣಾ ಶಿಬಿರವು ‘ಏಷ್ಯಾ ಬುಕ್ಸ್ ಆಫ್ ರೇಕಾರ್ಡ್’ನಲ್ಲಿ ವಿಶ್ವದಾಖಲೆಯಾಗಲಿದೆ.

ಉದ್ದೇಶ: ಭಾರತದಲ್ಲಿ ದಿನೇದಿನೇ ಮಧುಮೇಹದಿಂದಾಗಿ ಅನೇಕ ಜನರು ಕಿಡ್ನಿ ವೈಫಲ್ಯದಂತಹ ಭೀಕರ ಕಾಯಿಲೆಗೆ ತುತ್ತಾಗಿ ತಮ್ಮ ಜೀವವನ್ನೇ ಕಳಕೊಂಡಿದ್ದಾರೆ. ಮಧುಮೇಹವು ಒಂದು ಸೈಲೆಂಟ್ ಕಿಲ್ಲರ್ ಆಗಿದ್ದು ವ್ಯಕ್ತಿಗೆ ಮಧುಮೇಹ ಕಾಯಿಲೆ ಇರುವ ವಿಚಾರ ಅರಿವಿಗೆ ಬಾರದೆ ಕೊನೆಯ ಹಂತದಲ್ಲಿ ಗಂಭೀರ ಕಾಯಿಲೆಗಳಿಗೆ ತುತ್ತಾಗಿ ಬಳಿಕ ತಪಾಸಣೆಯ ವೇಳೆಯಲ್ಲಿ ಮಧುಮೇಹ ಇರುವ ವಿಚಾರ ಅರಿವಿಗೆ ಬರುತ್ತದೆ. ಮಧುಮೇಹದ ರೋಗಿಗೆ ಕೊನೆ ಹಂತದಲ್ಲಿ ಚಿಕಿತ್ಸೆಯು ಅಷ್ಟೊಂದು ಫಲಕಾರಿಯಾಗುವುದಿಲ್ಲ. ಅದಕ್ಕಾಗಿ ಪ್ರಾರಂಭಿಕ ಹಂತದಲ್ಲಿ ಮಧುಮೇಹ ಇರುವ ವಿಚಾರ ಗೊತ್ತಾದಲ್ಲಿ ಚಿಕಿತ್ಸೆ ಪರಿಣಾಮಕಾರಿಯಾಗುತ್ತದೆ. ಈ ಕಾರಣದಿಂದ ಜನಸಾಮಾನ್ಯರಿಗೆ ಮಧುಮೇಹದ ಬಗ್ಗೆ ಜಾಗೃತಿ ಮೂಡಿಸುವ ಬೃಹತ್ ಜನ ಜಾಗೃತಿ ಶಿಬಿರ ಇದಾಗಿದೆ.
ಈ ನಿಟ್ಟಿನಲ್ಲಿ ಪುತ್ತೂರಿನಲ್ಲಿರುವ ಏಳು ರೋಟರಿ ಕ್ಲಬ್ ಗಳು ಸೇರಿ ಸ 29 ಬುಧವಾರದಂದು ಪುತ್ತೂರಿನ ನಾನಾ ಕಡೆಗಳಲ್ಲಿ ಬೃಹತ್ ಉಚಿತ ಮಧುಮೇಹ ತಪಾಸಣಾ ಶಿಬಿರವನ್ನು ನಡೆಸಲಿದ್ದಾರೆ.
ಪುತ್ತೂರಿನ 7 ರೋಟರಿಕ್ಲಬ್ ಗಳು ಈ ಕೆಳಗೆ ಉಲ್ಲೇಖಿಸಿದ ಸ್ಥಳಗಳಲ್ಲಿ 29-09-2021 ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ತನಕ ಉಚಿತ ಮಧುಮೇಹ ತಪಾಸಣಾ ಶಿಬಿರವನ್ನು ನಡೆಸಲಿದ್ದಾರೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ರೋಟರಿ ಕ್ಲಬ್ ಪ್ರಕಟಣೆಯಲ್ಲಿ ತಿಳಿಸಿದೆ.
- ರೋಟರಿ ಕ್ಲಬ್ ಪುತ್ತೂರು ಈಸ್ಟ್ ನಿಂದ- ಪ್ರಾಥಮಿಕ ಆರೋಗ್ಯ ಕೇಂದ್ರ ತಿಂಗಳಾಡಿ, ಪಂಚಮಿ – ತಿಂಗಳಾಡಿ
- ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ನಿಂದ – ಸರಕಾರಿ ಆಸ್ಪತ್ರೆ ವಠಾರದಲ್ಲಿ
- ರೋಟರಿ ಕ್ಲಬ್ ಪುತ್ತೂರು ಎಲೈಟ್ ನಿಂದ – ಮಾಸ್ಟರ್ ಪ್ಲಾನರಿ, ನೆಹರು ನಗರ ಪುತ್ತೂರು ,ಸುಧಾನ ಶಾಲೆ.
- ರೋಟರಿ ಕ್ಲಬ್ ಪುತ್ತೂರು ಸ್ವರ್ಣ ದಿಂದ – ಸವಣೂರು ಗ್ರಾಮ ಪಂಚಾಯತ್ ಮುಂಭಾಗದಲ್ಲಿ
- ರೋಟರಿ ಕ್ಲಬ್ ಪುತ್ತೂರು ನಿಂದ – ಕುಂಬ್ರ ಜಂಕ್ಷನ್, ಪುರುಷರಕಟ್ಟೆ ಜಂಕ್ಷನ್,ಕಬಕ ಜಂಕ್ಷನ್
- ರೋಟರಿ ಕ್ಲಬ್ ಪುತ್ತೂರು ಸಿಟಿ ಯಿಂದ – ಕೆ.ಎಸ್.ಆರ್.ಟಿ.ಸಿ ಬಸ್ ಸ್ಟಾಂಡ್ , ಪ್ರಶಾಂತಿ ಆಯುರ್ವೇದಿಕ್ ಕ್ಲಿನಿಕ್, ಪ್ರಭು ಬಿಲ್ಡಿಂಗ್, ಪುತ್ತೂರು
- ರೋಟರಿ ಕ್ಲಬ್ ಯುವ ದಿಂದ- ಶ್ರೀರಾಮ ಸೌಧ,ದರ್ಬೆ ವೃತ್ತ ಪುತ್ತೂರು 2. ಕುಂಬ್ರ -ತಿಂಗಲಾಡಿ ರಸ್ತೆಯಲ್ಲಿ ಭಾರತ್ ಪೆಟ್ರೋಲ್ ಪಂಪ್ ನಲ್ಲಿ