ಪುತ್ತೂರು: ಪ್ರಸಿದ್ಧ ಸ್ವಾದಿಷ್ಟಕರ ಸ್ವೀಟ್ಸ್ ಗಳ ಮಳಿಗೆ, ಪುತ್ತೂರಿಗರ ಮನಗೆದ್ದ ‘ಬಿಗ್ ಮಿಶ್ರಾ ಪೇಡಾ’ ಸ್ಥಳಾಂತರಗೊಂಡು ಬೊಳ್ವಾರಿನ ಮಿಶ್ರಾ ಲೌಂಜ್ ನಲ್ಲಿ ಅ.03 ರಂದು ಶುಭಾರಂಭಗೊಳ್ಳಲಿದೆ.
1933ರಲ್ಲಿ ಹುಬ್ಬಲ್ಳಿಯಲ್ಲಿ ಧಾರವಡ ಪೇಡದೊಂದಿಗೆ ಆರಂಭವಾದ ಮಿಶ್ರಾ ಫೆಡಾ ಇಂದು ಸುಮಾರು 500ರಷ್ಟು ಸ್ವೀಟ್ ಐಟಂಗಳೊಂದಿಗೆ ಕೇವಲ ಕರ್ನಾಟಕ ಮಾತ್ರವಲ್ಲದೇ ಕೇರಳ, ಗೋವಾದಲ್ಲೂ ತನ್ನ ಶ್ರೇಷ್ಠವಾದ ಗುಣಮಟ್ಟದ ಸೇವೆ ಹಾಗೂ ರುಚಿಯಿಂದ ವ್ಯಾವಹಾರಿಕವಾಗಿಯೂ ವಿಸ್ತರಿಸಿಕೊಂಡಿದ್ದು, ಗ್ರಾಹಕರ ಪಾಲಿನ ಅಚ್ಚುಮೆಚ್ಚಿನ ಸಿಹಿ ಉತ್ಪನ್ನವಾಗಿ ಗುರುತಿಸಿಕೊಂಡಿದೆ. ಬೇಕರಿ ಐಟಂಗಳು, ಬಿಗ್ ಬ್ರೆಡ್, ಕುಕೀಸ್, ಬಿಸ್ಕತ್,ಇನ್ಸಾಂಟ್ ಮಿಕ್ಸ್, ಮಸಾಲಾ ಐಟಂ, ಮಿಲ್ಕ್ ಪ್ರೊಡಕ್ಟ್, ಪನ್ನೀರ್‌ನಂತಹ ಹಲವು ರೀತಿಯ ಬೇಕರಿ ಸಂಬಂಧಿತ ಐಟಂಗಳನ್ನು ಉತ್ಪಾದಿಸಿ ಮಾರುಕಟ್ಟೆಯಲ್ಲಿ ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡಿದೆ ‘ಮಿಶ್ರ ಪೇಡಾ’..
ಪುತ್ತೂರಿನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದ ಎಎಂ ಕಾಂಪ್ಲೆಕ್ಸ್ ನಲ್ಲಿ ಕಾರ್ಯಚರಿಸುತ್ತಿದ್ದ ‘ಬಿಗ್ ಮಿಶ್ರಾ ಪೇಡಾ’ ಇನ್ನು ಮುಂದೆ ಬೊಳುವಾರಿನಲ್ಲಿ ಕಾರ್ಯಚರಿಸಲಿದೆ. ಹಾಗೆಯೇ ಜೋಮ್ಯಾಟೋದಲ್ಲಿ ಆನ್ಲೈನ್ ಆರ್ಡರ್ ವ್ಯವಸ್ಥೆ ಕೂಡ ಇದೆ. ಗ್ರಾಹಕರು ಸಹಕರಿಸುವಂತೆ ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.