ವಿಟ್ಲ: ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕಕ್ಕೆ ಕರ್ನಾಟಕ ಹೈಕೋರ್ಟ್ ಸರ್ಕಾರಕ್ಕೆ ಆದೇಶ ನೀಡಿದ ಹಿನ್ನೆಲೆಯಲ್ಲಿ ವಿಟ್ಲ ಬಸ್ ನಿಲ್ದಾಣದ ಬಳಿ ವಿಶ್ವ ಹಿಂದೂ ಪರಿಷದ್, ಬಜರಂಗದಳದ ವತಿಯಿಂದ ಪಟಾಕಿ ಸಿಡಿಸಿ ಸಿಹಿತಿಂಡಿ ಹಂಚಿ ಸಂಭ್ರಮಿಸಲಾಯಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘ ಮಂಡಲ ಸಹ ಕಾರ್ಯವಾಹ ವಿನೋದ್ ಶೃಂಗೇರಿ ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಜಯಂತ್ ಸಿಎಚ್, ಜಗದೀಶ್ ಪಾಣೆಮಜಲು, ಚರಣ್ ಕಾಪುಮಜಲು, ಶ್ರೀಕೃಷ್ಣ ವಿಟ್ಲ, ಪುನೀತ್ ಮಾಡತ್ತಾರ್, ಅರುಣ್ ವಿಟ್ಲ, ರಾಜೇಶ್ ಬೊಬ್ಬೆಕೇರಿ, ಚಂದ್ರಹಾಸ ಕನ್ಯಾನ,ಉದಯ ಅಲಂಗಾರು, ಹರೀಶ್ ಸಿಎಚ್, ವಿನಯ್ ಆಲಂಗಾರ್, ಶರತ್ ಎನ್ಎಸ್, ರಾಜೇಶ್ ಅನ್ನಮೂಲೆ, ಸುರೇಶ್ ಶಿವಾಜಿನಗರ, ಶಿಶಿರ್ ಕೂಡೂರ್, ಪ್ರಕಾಶ್ ಕೈಂತಿಲ ಉಪಸ್ಥಿತರಿದ್ದರು.