ಕಲ್ಲಡ್ಕ: ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕಕ್ಕೆ ಕರ್ನಾಟಕ ಹೈ ಕೋರ್ಟ್ ಸರ್ಕಾರಕ್ಕೆ ಆದೇಶ ನೀಡಿದ ಹಿನ್ನೆಲೆಯಲ್ಲಿ ವಿಶ್ವಹಿಂದೂ ಪರಿಷದ್ ಬಜರಂಗದಳ ಕಲ್ಲಡ್ಕ ವಲಯದಿಂದ ಕಲ್ಲಡ್ಕ ಶ್ರೀರಾಮ ಮಂದಿರದ ದ್ವಾರದ ಮುಂಭಾಗದಲ್ಲಿ ಸಂಭ್ರಮಾಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ವಿಟ್ಲ ತಾಲೂಕು ಕಾರ್ಯವಾಹ ಸುಜಿತ್ ಕೊಟ್ಟಾರಿ, ವಿಟ್ಲ ಪ್ರಖಂಡ ಬಜರಂಗದಳ ಸಂಚಾಲಕ ಮಿಥುನ್ ಪೂಜಾರಿ ಕಲ್ಲಡ್ಕ, ವಿಟ್ಲ ಪ್ರಖಂಡ ಬಜರಂಗದಳ ಗೋರಕ್ಷಾ ಪ್ರಮುಖ್ ಅಮಿತ್ ಕಲ್ಲಡ್ಕ, ಕಲ್ಲಡ್ಕ ವಲಯ ವಿಶ್ವಹಿಂದೂ ಪರಿಷದ್ ಬಜರಂಗದಳ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿಗಾರ್, ಕಲ್ಲಡ್ಕ ವಲಯ ಬಜರಂಗದಳ ಸಂಚಾಲಕ ಮೋಹನದಾಸ್ ಪೂಜಾರಿ ಹಾಗೂ ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.