ಪುತ್ತೂರು : ಪುತ್ತೂರು ಸುಳ್ಯ ರಸ್ತೆಯ ಸಂತ ಫಿಲೋಮಿನಾ ಕಾಲೇಜು ಮುಂಭಾಗದಲ್ಲಿನ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಲಿಮಿಟೆಡ್ ಬಳಿ ವ್ಯವಹರಿಸುತ್ತಿರುವ ಸೌತ್ ಕೆನರಾ ಡಾಟ್ ಕಾಮ್ ಇದರ ಆಶ್ರಯದಲ್ಲಿ ಎಲ್ ಇ ಡಿ ಲೈಟ್ಸ್ ಪ್ರದರ್ಶನ ಹಾಗೂ ಮಾರಾಟದ ಬೃಹತ್ ಮೇಳ ಸೆ 30ರಿಂದ ಅ. 3ರವರೆಗೆ ಬೆಳಿಗ್ಗೆಯಿಂದ ರಾತ್ರಿಯವರೆಗೆ ನಾಲ್ಕು ದಿನ ಜರುಗಲಿದೆ.
ಪುತ್ತೂರು ಮುಳಿಯ ಜ್ಯುವೆಲ್ಲರ್ಸ್ ನ ಸಿಎಂಡಿ ಹಾಗೂ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೇಶವ ಪ್ರಸಾದ್ ಮುಳಿಯರವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕರ್ನಾಟಕ ರಾಜ್ಯ ಅನುಮೋದಿಸಲಾದ ಎಲೆಕ್ಟ್ರಿಕಲ್ ಕಂಟ್ರಾಕ್ಟರ್ಸ್ ಅಸೋಸಿಯೇಷನ್ ಬೆಂಗಳೂರು ಇದರ ಅಧ್ಯಕ್ಷ ಹರಿಪ್ರಸಾದ್ ಪಿ ಕೆ, ಪೇಸ್ ಪುತ್ತೂರು ಅಧ್ಯಕ್ಷ ರಮೇಶ್ ಭಟ್ ಮಿತ್ತೂರು, ಕ್ಲಾಸ್ – 1 ಪಿಡಬ್ಲ್ಯೂಡಿ ಕಂಟ್ರಾಕ್ಟರ್ ಹಾಗೂ ಜೆಕೆ ಕನ್ಸ್ಟ್ರಕ್ಷನ್ ಮಾಲಕ ಜಯಕುಮಾರ್ ನಾಯರ್ ರವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ನಾಲ್ಕು ದಿನಗಳ ಪ್ರದರ್ಶನ ಮೇಳದಲ್ಲಿ ಆಗಮಿಸುವ ಗ್ರಾಹಕರಿಗೆ ಉಚಿತ ಪ್ರವೇಶವಿದ್ದು, ಗ್ರಾಹಕರು ಕಡ್ಡಾಯವಾಗಿ ಕೋವಿಡ್ ನಿಯಮ ಪಾಲಿಸಿ ಸಹಕರಿಸಬೇಕು, ಹೆಚ್ಚಿನ ಮಾಹಿತಿಗಾಗಿ 9448546663, 9845522020 ನಂಬರಿಗೆ ಸಂಪರ್ಕಿಸಬಹುದು ಎಂದು ಸೌತ್ ಕೆನರಾ ಸಂಸ್ಥೆಯ ಮುಖ್ಯಸ್ಥರಾದ ಪಶುಪತಿ ಶರ್ಮ ಹಾಗೂ ಅನ್ನಪೂರ್ಣ ಶರ್ಮರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ಯಾನಿಟರಿ ನ್ಯಾಪ್ ಕಿನ್ ಬರ್ನಿಂಗ್ ಮೆಶಿನ್ ಪ್ರದರ್ಶನ : ಪ್ರದರ್ಶನದಲ್ಲಿ ಕ್ರಾಂಪ್ಟನ್, ಫಿಲಿಪ್ಸ್, ಇಕೋಲಿಂಕ್, ಪೋಲಿಕ್ಯಾಬ್, ವಿಪ್ರೋ ಮುಂತಾದ ಹೆಸರಾಂತ ಕಂಪೆನಿಗಳ ಎಲ್ ಇ ಡಿ ಲೈಟ್ಸ್ ಗಳ ಪ್ರದರ್ಶನ ಹಾಗೂ ಮಾರಾಟವಿದೆ. ಇದರ ಜತೆಗೆ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಸ್ಯಾನಿಟರಿ ನ್ಯಾಪ್ ಕಿನ್ ಬರ್ನಿಂಗ್ ಮೆಶಿನ್ ಪ್ರದರ್ಶನ ಕೂಡಾ ಇದೆ. ಲಕ್ಕೀ ಡ್ರಾ ಮುಖಾಂತರ ಕ್ರಾಂಪ್ಟನ್ ಫ್ಯಾನ್ ವಿಜೇತರಾಗುವ ಸುವರ್ಣಾವಕಾಶವನ್ನೂ ಗ್ರಾಹಕರು ಪಡೆಯಲಿದ್ದಾರೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.