ಉಪ್ಪಿನಂಗಡಿ: ಸಮೀಪದ ಬಿಳಿಯೂರು ಸಂಪಿಗೆಕೋಡಿ ಎಂಬಲ್ಲಿ ಆಕಸ್ಮಿಕವಾಗಿ ಪೆಟ್ರೋಲ್ ಸೇವಿಸಿ ಅಸ್ವಸ್ಥಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.
ಬಂಟ್ವಾಳ ನಿವಾಸಿಯಾಗಿರುವ ಪದ್ಮಾವತಿ (79) ರವರು, ಅನಾರೋಗ್ಯದಿಂದ ಬಳಲುತ್ತಿದ್ದು, ಈ ವೇಳೆ ಇನ್ನೊಬ್ಬರನ್ನು ಅವಲಂಬಿಸಿ ಬದುಕಬೇಕಾಯಿತಲ್ಲ ಎಂಬ ಕೊರಗಿನಿಂದ ಸೆ. 26 ರಂದು ಮನೆಯಲ್ಲಿನ ಹುಲ್ಲು ಕತ್ತರಿಸುವ ಯಂತ್ರದ ಮೋಟಾರು ಚಾಲನೆಗೆಂದು ಬಾಟಲಿಯಲ್ಲಿ ತಂದಿರಿಸಿದ್ದ ಪೆಟ್ರೋಲ್ ಅನ್ನು ಕುಡಿದಿದ್ದರು, ಇದರಿಂದಾಗಿ ಅಸಸ್ಥರಾಗಿದ್ದ ಇವರನ್ನು ಮಂಗಳೂರಿನ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ದಂದು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಮೃತರ ಅಳಿಯ ಉಮಾನಾಥ್ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.