ಕರ್ನಾಟಕ ಆರೋಗ್ಯ ಇಲಾಖೆಯಲ್ಲಿ ಆರೋಗ್ಯಾಧಿಕಾರಿ ಸಹಿತ ನರ್ಸ್ ಗಳ ನೇಮಕಾತಿಗೆ ಗುತ್ತಿಗೆ ಆಧಾರದಲ್ಲಿ ಅರ್ಹ ಅಭ್ಯರ್ಥಿಗಳ ನಿಯೋಜನೆ ಇಲಾಖೆಯು ಮುಂದಾಗಿದ್ದು,ಒಟ್ಟು 3006 ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳು ಪ್ರಯತ್ನಸಬಹುದಾಗಿದೆ.
ದಕ್ಷಿಣ ಕನ್ನಡ,ಉಡುಪಿ ಸಹಿತ ರಾಜ್ಯದ ಹಲವು ಜಿಲ್ಲೆಗಳಿಗೆ ನೇಮಕಾತಿ ನಡೆಯಲಿದ್ದು,ಉದ್ಯೋಗಾಕಾಂಕ್ಷಿಗಳು ಒನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿ,ಲಿಖಿತ ಪರೀಕ್ಷೆ ಮೂಲಕ ಆಯ್ಕೆ ನಡೆಯುತ್ತದೆ.
ವಿದ್ಯಾರ್ಹತೆ:
- ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯಗಳಿಂದ ಬಿಎಸ್ಸಿ ನರ್ಸಿಂಗ್,ಪೋಸ್ಟ್ ಬಿಎ ಸ್ಸಿ ನರ್ಸಿಂಗ್ ಜೊತೆಗೆ ರಾಜ್ಯ ನರ್ಸಿಂಗ್ ಕೌನ್ಸಿಲ್ ಕೆಎನ್ ಸಿ/ಐ ಎನ್ ಸಿ ನೋಂದಣಿ ಹೊಂದಿರಬೇಕಾಗಿದೆ.
- ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಸಂಭಾಷಣೆ ಉಳ್ಳವರಾಗಿದ್ದು,ಕರ್ನಾಟಕದಲ್ಲಿ 10 ವರ್ಷ ವಾಸಿಸಿರುವ ಆಧಾರ ಸಹಿತ ಎಸ್ ಎಸ್ ಎಲ್ ಸಿ ಯಲ್ಲಿ ಕನ್ನಡ ಪ್ರಥಮ ಭಾಷೆಯಾಗಿ ಪಾಸ್ ಆಗಿರಬೇಕಾಗಿದೆ.
ಆಯ್ಕೆಗೊಂಡ ಅಭ್ಯರ್ಥಿಗಳಿಗೆ 24200 ಜೊತೆಗೆ ಪ್ರೋತ್ಸಾಹ ಧನ ಸುಮಾರು 8000 ಸಿಗಲಿದ್ದು, ಅಕ್ಟೋಬರ್ 18 ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.