ಪುತ್ತೂರು : ದರ್ಬೆಯ ಪೆಟ್ರೋಲ್ ಬಂಕ್ ಒಂದರಲ್ಲಿ ಇನ್ನೋವಾ ಕಾರು ಚಾಲಕ ಹಾಗೂ ತಂಡದ ನಡುವೆ ಗಲಾಟೆ ನಡೆದ ಘಟನೆ ಆ.24 ರಂದು ರಾತ್ರಿ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅದರಲ್ಲಿ ಓರ್ವ ಆರೋಪಿ ಅಶ್ರಫ್ ಗೆ ಸೆ.18 ರಂದು ಜಾಮೀನು ಮಂಜೂರು ಮಾಡಿದ್ದು, ಇಬ್ಬರು ಆರೋಪಿಗಳಿಗೆ ಸೆ.30 ರಂದು ಪುತ್ತೂರಿನ 5 ನೇ ಹೆಚ್ಚುವರಿ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ ಎಂದು ತಿಳಿದು ಬಂದಿದೆ.
ಆ.24 ರಂದು ರಾತ್ರಿ ದರ್ಬೆಯ ಪೆಟ್ರೋಲ್ ಬಂಕ್ ಒಂದರಲ್ಲಿ ಇನ್ನೋವಾ ಕಾರು ಚಾಲಕ ಹಾಗೂ ತಂಡದ ನಡುವೆ ಗಲಾಟೆ ನಡೆದಿತ್ತು, ಈ ಘಟನೆಯಲ್ಲಿ ಇನ್ನೋವಾ ಕಾರು ಚಾಲಕ ಕೆಮ್ಮಾಯಿ ನಿವಾಸಿ ರಾಧಾಕೃಷ್ಣ (ಆರ್. ಕೆ) ಗಾಯಗೊಂಡಿದ್ದು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು 6 ಜನ ಆರೋಪಿಗಳನ್ನು ಬಂಧಿಸಿದ್ದರು. 6 ಆರೋಪಿಗಳಲ್ಲಿ ಒಬ್ಬನಾದ ಅಶ್ರಫ್ ಗೆ ಈ ಮೊದಲೇ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು, ಆರೋಪಿಗಳಾದ ರೆಮಂತ್ ಮತ್ತು ದೇವಿಪ್ರಸಾದ್ ಗೆ ಇಂದು ಜಾಮೀನು ಮಂಜೂರು ಮಾಡಿದೆ. ಆರೋಪಿಗಳ ಪರ ನ್ಯಾಯಾವಾದಿ ಸುರೇಶ್ ನಾವೂರು ಮತ್ತು ದೀಪಕ್ ಬೊಳ್ವಾರ್ ವಾದಿಸಿದರು.