ಪುತ್ತೂರು: ಕೂಲಿ ಕಾರ್ಮಿಕರೊಬ್ಬರು ನೇಣು ಬಿಗಿದು ಆತ್ಮಹತ್ಯೆಗೆ ಮಾಡಿಕೊಂಡಿರುವ ಘಟನೆ ಸೆ.30ರಂದು ಪುತ್ತೂರಿನ ನಿಡ್ಪಳ್ಳಿ ಗ್ರಾಮದ ಮಾರ್ಲಕುಮೇರು ಎಂಬಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ನಿಡ್ಪಳ್ಳಿ ಗ್ರಾಮದ ಮಾರ್ಲಕುಮೇರು ನಿವಾಸಿ ದಿನೇಶ್(35) ಎಂದು ಗುರುತಿಸಲಾಗಿದೆ.
ಮೃತರ ಪತ್ನಿ ಮಧ್ಯಾಹ್ನದ ವೇಳೆ ಮನೆಗೆ ಬಂದಾಗ ದಿನೇಶ್ ಅವರು ಮನೆಯ ಬಿದಿರಿನ ಅಡ್ಡಕ್ಕೆ ಸೀರೆಯನ್ನು ಕಟ್ಟಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.