ಪುತ್ತೂರು:ಅಸ್ಸಾಂನಲ್ಲಿ ಪ್ರತಿಭಟನಕಾರರ ಮೇಲೆ ದಾಳಿ ಹಾಗೂ ಹತ್ಯೆಯನ್ನು ಖಂಡಿಸಿ ಅಸ್ಸಾಂ ಸರಕಾರ ಹಾಗೂ ಪೊಲೀಸ್ ಕ್ರೌರ್ಯದ ವಿರುದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸೆ.೨೮ರಂದು ಮಿನಿ ವಿಧಾನ ಸೌಧದ ಮುಂಭಾದ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಪಿಎಫ್‌ಐ ಪುತ್ತೂರು ಜಿಲ್ಲಾಧ್ಯಕ್ಷ ಜಾಬೀರ್ ಅರಿಯಡ್ಕ ಮಾತನಾಡಿ, ನಾವು ಉತ್ತಮ ಮರಣಕ್ಕಾಗಿ ಹುಟ್ಟಿದ್ದೇವೆ. ನಮ್ಮ ಜೀವನ ಮರಣ ನಂತರ ಇರುವುದು. ಆ ಪ್ರಯತ್ನದಲ್ಲಿ ಹೋಗುತ್ತಿದೆ. ಈ ವಿಶ್ವಾಸದ ಪ್ರಾರ್ಥನೆಯಲ್ಲಿ ಹೋಗುತ್ತಿರುವ ನಮ್ಮ ಮುಂದೆ ನಿಮ್ಮ ಬೆದರಿಕೆ, ಬೂಟು, ಖಾಕಿ, ಲಾಠಿ, ಗನ್, ಪೆನ್ ಲೆಕ್ಕಕ್ಕಿಲ್ಲ. ಹೆಣದ ಮೇಲೆ ನಿಮ್ಮ ಕ್ರೌರ್ಯ. ಹೆಣದ ಮೇಲೆ ಬೂಟಿನಿಂದ ಪೊಲೀಸರು ಒದೆಯುವುದಾರೆ ನೀವು ಮಾನವ ಕುಲಕ್ಕೆ ಹುಟ್ಟಿದ್ದೀರಾ? ದೇಶದಲ್ಲಿ ಹಲವಾರು ಹೋರಾಟಗಳನ್ನು ಮಾಡಿರುವ ನಾವು ನಿಮ್ಮ ರೀತಿಯಲ್ಲಿ ಹೋರಾಟ ಮಾಡುವುದಿಲ್ಲ. ಆರ್‌ಎಸ್‌ಎಸ್ ವಿರುದ್ದ ಹೋರಾಟದಲ್ಲಿ ಒಂದಿಂಚು ಹಿಂದೆ ಸರಿಯುವುದಿಲ್ಲ. ದೇಶದ ಅಲ್ಪ ಸಂಖ್ಯಾತರು, ದಲಿತರನ್ನು ಕಡೆಗಣಿಸುವುದಾದರೆ ಆರ್‌ಎಸ್‌ಎಸ್‌ಗೂ ಮುಂದೋಂದು ದಿನ ಇಂತಹ ಪರಿಸ್ಥಿತಿ ಬರಲಿದೆ ಎಂದು ಎಚ್ಚರಿಸಿದರು.
ಕಾಂಗ್ರೆಸ್‌ನಲ್ಲಿ ಎರಡು ಕಾಮಿಡಿ ಪೀಸ್
ಕಾಂಗ್ರೆಸ್‌ನಲ್ಲಿ ಮುಸ್ಲಿಂ ಸಮುದಾಯವನ್ನು ವಿರೋಧಿಸುವ ನಾಯಕರಿದ್ದಾರೆ. ಪುತ್ತೂರು ಕಾಂಗ್ರೆಸ್‌ನಲ್ಲಿ ಎರಡು ಕಾಮಿಡಿ ಪೀಸ್‌ಗಳಿವೆ. ಪದೇ ಪದೇ ಬ್ಲಾಕ್ ಕಚೇರಿಯಲ್ಲಿ ಕುಲಿತು ಎಸ್‌ಡಿಪಿಐ ವಿರುದ್ದ ವಾಗ್ದಾಳಿ ನಡೆಸುತ್ತಿದೆ. ಅವರಿಗೆ ಎಸ್‌ಡಿಪಿಐ ವಿಚಾರಗಳಿದ್ದರೆ ಮಾತ್ರ ಪತ್ರಿಕಾಗೋಷ್ಠಿ. ಬೇರೆ ವಿಚಾರಗಳಿಲ್ಲ. ಆ ಪತ್ರಿಕಾಗೋಷ್ಠಿ ವೀರರಿಗೆ ಅಸ್ಸಾಂ ಕ್ರೌರ್ಯ ಕಾಣಿಲ್ಲ. ಅದರೆ ವಿರುದ್ಧ ಪ್ರತಿಭಟಿಸಿಲ್ಲ. ಎಸ್‌ಡಿಪಿಐ ಸಭೆ ನಡೆಸಿದರೆ, ದೇವಸ್ಥಾನದಲ್ಲಿ ಬೀಗ ತೆರೆಯದಿದ್ದರೆ ಪತ್ರಿಕಾಗೋಷ್ಠಿ ನಡೆಸುವುದಲ್ಲದೆ ಐಬಿಯಲ್ಲಿ ಕುಲಿತು ನಮ್ಮೊಂದಿಗೆ ಹೊಂದಾಣಿಕೆ ಮಾಡುವಾಗ ಅವರಿಗೆ ನಾವು ವಿರೋಧ ಕಂಡಿಲ್ಲ. ಅವರು ಲಜ್ಜೆಗೆಟ್ಟವರು, ಮಾನಗೆಟ್ಟವರು ದೃಡಯತೆಯಿಲ್ಲ. ಕಾಂಗ್ರೆಸ್‌ನ ಒಂದು ಗ್ರೂಪ್ ೧೦ ಬಾರಿ ಬ್ಲಾಕ್ ಕಚೇರಿಯ ಬೀಗ ಮುರಿದಿದರೆ ಮತ್ತೋಂದು ಗ್ರೂಪ್ ಹಾಕುವ ಅವರು ನಮಗೆ ಪಾಠ ಹೇಳುತ್ತಿದ್ದಾರೆ ಎಂದು ಜಾಬೀರ್ ಅರಿಯಡ್ಕ ಕಾಂಗ್ರೆಸ್ ವಿರುದ್ದ ಕಿಡಿಕಾರಿದರು.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಅಶ್ರಫ್ ಎ.ಕೆ ಮಾತನಾಡಿ, ಅಸ್ಸಾ ನಿರಂತರ ವಿದಾದಕ್ಕಿಡಾಗುವ ರಾಜ್ಯ. ಎನ್‌ಆರ್‌ಸಿಗೆ ಬಲಿಯಾದ ರಾಜ್ಯ. ಒಂದು ವರ್ಗವನ್ನು ಗುರಿಪಡಿಸುವ ಷಡ್ಯಂತ್ರ ನಿರಂತವಾಗಿ ನಡೆಯುತ್ತಿದೆ. ಸರಕಾರವೆಂದರೆ ಅವರ ಅಪ್ಪನ ಆಸ್ತಿಯಲ್ಲ. ಜನರಿಂದ ಆಯ್ಕೆಯಾದ ಸರಕಾರದಲ್ಲಿ ಸೌಲಭ್ಯಗಳನ್ನು ಕೇಳುವುದು ನಮ್ಮಂತ ಬಡವರ ಹಕ್ಕು. ಅಲ್ಲಿ ಕೂಲಿ ಕಾರ್ಮಿಕರ ಮೇಲೆ ಕಳೆದ ಎರಡು ಮೂರು ವರ್ಷಗಳಿಂದ ನಿರಂತರ ದೌರ್ಜನ್ಯ ನಡೆಯುತ್ತಿದೆ. ಬಡ ಕೂಲಿ ಕಾರ್ಮಿಕರನ್ನು ಬಲವಂತವಾಗಿ ಒಕ್ಕಲೆಬ್ಬಿಸುವ ಸಂದರ್ಭದಲ್ಲಿ ಅದನ್ನು ವಿರೋಧಿಸಿ ಒಬ್ಬ ಕಾರ್ಮಿಕ ಕೋಲು ಹಿಡಿದು ಮುಂದೆ ಬಂದಾಗ ಅವರನ್ನು ತಡೆಯಲು ಸಾಧ್ಯವಾಗದೆ ಗುಂಡು ಹೊಡದು ಹತ್ಯೆ ಮಾಡುವುದಾದರೆ ಪೊಲಿಸರು ಸಮವಸ್ತ್ರ ಕಳಚಿ ಮನೆಗೆಹೋಗಬಹುದು. ಪೊಲೀಸರು ಆಡಳಿತ ವ್ಯವಸ್ಥೆಯ ಗುಲಾಮರು. ಒಂದು ಸಮುದಾಯವನ್ನು ನಾಶ ಮಾಡಲು ಪೊಲೀಸರಿಗೆ ಬಂದೂಕು ಕೊಟ್ಟಿರುವುದು ಕೊಟ್ಟಿರುವುದೋ ಎಂಬ ಸಂಶಯ ಮೂಡುತ್ತಿದೆ. ಬಿಜೆಪಿ ಸರಕಾರವಿರುವಲ್ಲಿ ಗುಂಡು ಹೊಡೆಯುವುದು ಅವರ ಸಂಸ್ಕೃತಿ. ಕೊಲ್ಲುವುದರ ಮೂಲಕವೇ ಅವರು ಅಧಿಕಾರ ಹಿಡಿದವರು, ಗಾಂಧಿ ಹತ್ಯೆ, ಬಾಬರಿ ಮಸೀದಿ ಧ್ವಂಸವನ್ನು ಸಂಭ್ರಮಿಸಿದವರು. ಹೀಗಾಗಿ ಅವರ ಪ್ರಕ್ರಿಯೆ ಮುಂದುವರಿಯುತ್ತಿದೆ ಎಂದು ಆರೋಪಿಸಿದರು.
ಎಸ್‌ಡಿಪಿಐ ಅಧ್ಯಕ್ಷ ಇಬ್ರಾಹಿಂ ಸಾಗರ್, ಅಶ್ರಫ್ ಬಾವು, ಸಿದ್ದೀಕ್, ಹಮೀದ್ ಸಾಲ್ಮರ, ಉಮ್ಮರ್ ಕೂರ್ನಡ್ಕ, ಕೆ.ಎಚ್ ಖಾಸೀಂ ಹಾಜಿ ಸೇರಿದಂತೆ ಹಲವು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿ ಆರ್‌ಎಸ್‌ಎಸ್, ಕೇಂದ್ರ ಸರಕಾರ, ಪ್ರಧಾನಿ ಮೋದಿ, ಅಸ್ಸಾಂ ಸರಕಾರದ ವಿರುದ್ದ ದಿಕ್ಕಾರ ಕೂಗಿದರು.
WATCH VIDEO 🔽