ವಿಟ್ಲ: ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಗಾಂಧೀ ಜಯಂತಿ ಹಾಗೂ ಶಾಸ್ತ್ರೀ ಜಯಂತಿ ಪ್ರಯುಕ್ತ ಸ್ವಚ್ಚತಾ ಕಾರ್ಯಕ್ರಮ ವಿಟ್ಲ ಖಾಸಗಿ ಬಸ್ ನಿಲ್ದಾಣದ ಪರಿಸರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಒಬಿಸಿ ಮೋರ್ಚಾ ಮಂಡಲ ಉಪಾಧ್ಯಕ್ಷ ಉದಯಕುಮಾರ್ ಆಲಂಗಾರ್, ರಾಜೇಶ್ ಬೊಬ್ಬೆಕೇರಿ, ಶರತ್ ಎನ್ಎಸ್, ಜಯಂತ ಸಿಎಚ್, ಗೋಪಾಲಕೃಷ್ಣ ಶೆಟ್ಟಿ, ಶ್ರೀಕೃಷ್ಣ ವಿಟ್ಲ, ಶರತ್ ಬೊಳಂತಿಮೊಗೆರು, ಉಮೇಶ್, ವಿಶ್ವನಾಥ್ ಉಪಸ್ಥಿತರಿದ್ದರು.