ಪುತ್ತೂರು: ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರೀ ಜನ್ಮದಿನದ ಪ್ರಯುಕ್ತ ಶ್ರೀರಾಮ ಗೆಳೆಯರ ಬಳಗದ ವತಿಯಿಂದ ಮುಂಡೂರು ಗ್ರಾಮದ ತೌಡಿಂಜಾಯಲ್ಲಿ ಅನಾರೋಗ್ಯದಿಂದ ಇದ್ದ ಕೊರಗಪ್ಪ ಎಂಬವರಿಗೆ ವೀಲ್ ಚೇರ್ ನೀಡಿ ಅವರಿಗೆ ಮಾನಸಿಕವಾಗಿ ಧೈರ್ಯ ತುಂಬುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ವೀಲ್ ಚೇರ್ ಅನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪುಷ್ಪ ಹಾಗೂ ಗೆಳೆಯರ ಬಳಗದ ಅಧ್ಯಕ್ಷ ಹರೀಶ್ ಬಿಕೆ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ಅಶೋಕ್ ಕುಮಾರ್, ಬಾಲಕೃಷ್ಣ ಪೂಜಾರಿ, ಅರುಣಾ ಕಣ್ಣರ್ನೂಜಿ, ಅರುಣ್ ಪುತ್ತಿಲ, ಅನಿಲ್ ಕಣ್ಣರ್ನೂಜಿ, ಧನಂಜಯ ಕಲ್ಲಮ, ಪುರುಷೋತ್ತಮ ಬಿಕೆ, ಮುಂಡೂರು ಮೃತ್ಯುಂಜೇಶ್ವರ ದೇವಸ್ಥಾನದ ಸದಸ್ಯರಾದ ಬಾಲಚಂದ್ರ ಕಡ್ಯ, ಶ್ರೀಧರ ನಾಯ್ಕ್, ರಾಧಾಕೃಷ್ಣ ನಾಯ್ಕ್, ಪ್ರತೀಕ್, ವಿಜಯ ಕೂಡುರಸ್ತೆ, ಯೋಗೀಶ್ ನಾಯ್ಕ್, ಸಂತೋಷ್ಕಡ್ಯ ಸನತ್, ಪ್ರಖ್ಯಾತ್ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.