ಪುತ್ತೂರು: ಗಾಂಧಿ ಜಯಂತಿ ಪ್ರಯುಕ್ತ ಶ್ರೀರಾಮ ಗೆಳೆಯರ ಬಳಗದ ಆಶ್ರಯದಲ್ಲಿ ಶ್ರೀ ಮೃತ್ಯುಂಜೇಶ್ವರ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ದೇವಸ್ಥಾನದ ಸುತ್ತ ಮುತ್ತ ಸ್ವಚ್ಛತೆ ಮಾಡಲಾಯಿತು. ಮುಖ್ಯ ದ್ವಾರದ ಬಳಿಯಿಂದ ದೇವಸ್ಥಾನದ ವರೆಗೆ ರಸ್ತೆಯ ಬದಿ ಬಿದ್ದ ಪ್ಲಾಸ್ಟಿಕ್ ಕಸ ಗಳನ್ನು ತೆಗೆಯಲಾಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯ ಬಾಲಚಂದ್ರ ಗೌಡ,ಜನಾರ್ದನ ಜೋಯಿಸ, ನಾಗೇಶ್ ನಾಯ್ಕ್, ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅರುಣ್ ಪುತ್ತಿಲ, ಮಹೇಶ್ಚಂದ್ರ ಸಾಲ್ಯಾನ್, ಮಾಜಿ ಸಮಿತಿ ಸದಸ್ಯರಾದ ಸುಂದರ ಗೌಡ ನಡುಬೈಲು, ಗ್ರಾಮ ಪಂಚಾಯತ್ ಸದಸ್ಯ ಅಶೋಕ್ ಪುತ್ತಿಲ, ಕುಕಿನಡ್ಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸದಾಶಿವ ಶೆಟ್ಟಿ, ಸಾಮಾಜಿಕ ಮುಂದಾಳು ನೇಸರ ಸುಧೀರ್ ಶೆಟ್ಟಿ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಶ್ರೀಕಾಂತ್ ಆಚಾರ್ ಹಿಂದಾರು, ಶ್ರೀರಾಮ ಗೆಳೆಯರ ಬಳಗದ
ಸದಸ್ಯರಾದ ಧನಂಜಯ ನಾಯ್ಕ್, ಜಗದೀಶ್ ನಾಯ್ಕ್, ಶ್ರೀಧರ ನಾಯ್ಕ್, ನಾರಾಯಣ ನಾಯ್ಕ್, ಪುರಂದರ ನಡುಬೈಲು, ದಿಗಂತ್ ಕುರೆಮಜಲು ಮತ್ತಿತರರು ಉಪಸ್ಥಿತರಿದ್ದರು.