ಪುತ್ತೂರು : ಕೆಲ ದಿನಗಳ ಹಿಂದೆ ನಡೆದ ರಾಷ್ಟ್ರ ಮಟ್ಟದ PG NEET ಪರೀಕ್ಷೆಯಲ್ಲಿ ಪುತ್ತೂರಿನ ಮುಂಡೂರು ಗ್ರಾಮದ ಹಿಂದಾರು ನಿವಾಸಿ ಶ್ರೀರಕ್ಷಾ ಆಚಾರ್ 103 ನೇ ರಾಂಕ್ ಪಡೆದು ಜಿಲ್ಲೆಗೆ ಪ್ರಥಮರಾಗಿದ್ದಾರೆ.

ಇವರು ತಮ್ಮ ಪ್ರೌಡ ಹಾಗೂ ಪದವಿ ಶಿಕ್ಷಣವನ್ನು ಮಂಗಳೂರಿನ ಎಕ್ಕೂರು ಕೇಂದ್ರೀಯ ವಿದ್ಯಾಲಯ ದಲ್ಲಿ ಹಾಗೂ MBBS ಪದವಿಯನ್ನು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ಮಾಡಿರುತ್ತಾರೆ.
ವಾಯುಸೇನೆಯಲ್ಲಿ ನಿವೃತ್ತಿ ಪಡೆದು ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ದಿವಾಕರ್ ಅಚಾರ್ ಹಾಗೂ ಚಂದ್ರಕಲಾ ದಂಪತಿಗಳ ಪುತ್ರಿಯಾಗಿದ್ದು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಗಳ ಸಂಚಾಲಕರಾದ ಬಾಸ್ಕರ್ ಆಚಾರ್ ಹಿಂದಾರು ರವರ ಸಹೋದರನ ಪುತ್ರಿಯಾಗಿದ್ದಾರೆ.