ಕನ್ಯಾನ: ದತ್ತಪೀಠ ತೀರ್ಪು ಹಿನ್ನಲೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಕನ್ಯಾನದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು.
ಬಜರಂಗದಳ ಕನ್ಯಾನ ವಲಯ ಸಹ ಸಂಚಾಲಕ ದಿನೇಶ್ ಕನ್ಯಾನ,ಲೋಕೇಶ್ ಗೌಡ, ವಿಶ್ವ ಹಿಂದು ಪರಿಷದ್ ಅಧ್ಯಕ್ಷ ಕೃಷ್ಣಪ್ಪ ಗೌಡ ಪಾನೆಯಡ್ಕ, ಸಂಚಾಲಕ ಮನೋಜ್ ಬನರಿ ವಿಶ್ವ ಹಿಂದೂ ಪರಿಷದ್ ಕಾರ್ಯದರ್ಶಿ ಇವರುಗಳ ಕಾರ್ಯಕ್ರಮ ನೇತೃತ್ವದಲ್ಲಿ ನಡೆಯಿತು.
ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷರಾದ ವಿನೋದ್ ಪಟ್ಲ ರವರು ದತ್ತಪೀಠದ ಹೈಕೋರ್ಟ್ ತೀರ್ಪು ಅನ್ನು ಸ್ವಾಗತಿಸಿದರು ಹಾಗು ಈ ವೇಳೆ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಂಭ್ರಮಿಸಿ ಸಿಹಿತಿಂಡಿ ವಿತರಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ರಘುರಾಮ್ ಶೆಟ್ಟಿ ಕನ್ಯಾನ, ಅಭಿಷೇಕ್ ರೈ. ಹಿಂದೂ ಜಾಗರಣ ವೇದಿಕೆ ಪ್ರಮುಖರಾದ ರಾಜೇಶ್ ಕರೋಪಾಡಿ,ಚೇತನ್ ಕಡಂಬು, ಬಜರಂಗದಳ ಸಂಚಾಲಕ ಪಚ್ಚು ಬಾಯರ್,ನಿತಿನ್ ಗೌಡ ಮರ್ತನಾಡಿ,ಕಿರಣ್ ಮೈರಾ, ನವೀನ್ ಕೋಟ್ಯಾನ್ ಕನ್ಯಾನ ಹಾಗೂ ಹಿಂದೂ ಕಾರ್ಯಕರ್ತರು ಉಪಸ್ಥಿತರಿದ್ದರು.