ಪುತ್ತೂರು: ಅನ್ಯಕೋಮಿನ ಯುವಕನೋರ್ವನ ಮನೆಯಲ್ಲಿ ಹಿಂದೂ ಯುವತಿ ಇರುವ ಮಾಹಿತಿ ದೊರೆತು ಸಾರ್ವಜನಿಕರು ಮನೆಯ ಮುಂಭಾಗ ಸೇರಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಕೊಳ್ತಿಗೆ ಗ್ರಾಮದ ಕುಂಟಿಕಾನದಲ್ಲಿ ನಡೆದಿತ್ತು, ಕೆಲ ದಿನಗಳ ಹಿಂದೆ ಆ ಯುವತಿ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.
ಈ ನಿಟ್ಟಿನಲ್ಲಿ ಯುವತಿಯ ಮನೆಗೆ ಥಲ್ಸೇರಿ ಸ್ವಾಮಿಗಳು ಹಾಗೂ ಹಿಂದೂ ಮುಖಂಡರು ಭೇಟಿ ನೀಡಿ ಯುವತಿಗೆ ಮತ್ತು ಮನೆಯವರಿಗೆ ಧೈರ್ಯ ಹೇಳಿ, ಯಾವುದೇ ಸಮಯದಲ್ಲಿ ಧೃತಿಗೆಡದಂತೆ ಸಾಂತ್ವನ ನೀಡಿದ್ದಾರೆ.
ಈ ಸಂದರ್ಭದಲ್ಲಿ ಶ್ರೀ ಪ್ರೇಮಾನಂದ ಸ್ವಾಮೀಜಿ ಥಲ್ಸೇರಿ, ಹಿಂದು ಐಕ್ಯ ವೇದಿ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆಪಿ ಸಾಜಿ, ಹಿಂದು ಜಾಗರಣ ವೇದಿಕೆ ಮಂಗಳೂರು ವಿಭಾಗ ಕಾರ್ಯದರ್ಶಿ ಚಿನ್ಮಯ್ ಈಶ್ವರಮಂಗಲ, ಹಿಂದು ಜಾಗರಣ ವೇದಿಕೆ ಪುತ್ತೂರು ಜಿಲ್ಲಾ ಮಾತೃ ಸುರಕ್ಷಾ ಪ್ರಮುಖ್ ರಾಜೇಶ್ ಪಂಚೋಡಿ ಹಾಗೂ ಹಿಂದು ಐಕ್ಯ ವೇದಿಕೆ ದೇಲಂಪಾಡಿ ಘಟಕದ ಅಧ್ಯಕ್ಷ ವಿನಯ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಯುವತಿ ಮನೆಗೆ ಹಿಂದೂ ಮುಖಂಡರ ಭೇಟಿಯೂ ಹೊಸ ಆಯಾಮಕ್ಕೆ ಕಾರಣವಾಗಿದೆ. ಇದೊಂದು ಲವ್ ಜಿಹಾದ್ ಪ್ರಕರಣ ಎಂದು ಹೇಳುತ್ತಿರುವ ಹಿಂದೂ ಸಂಘಟನೆಗಳು ಯುವತಿಯನ್ನು ಯಾವುದೇ ಕಾರಣಕ್ಕೂ ಈ ಜಾಲದಲ್ಲಿ ಬಲಿಯಾಗಲು ಬಿಡುವುದಿಲ್ಲ ಎಂದಿದ್ದಾರೆ.