ಪುತ್ತೂರು: ಮರಾಟಿ ಸಮಾಜ ಸೇವಾ ಸಂಘ ನರಿಮೊಗರು ವತಿಯಿಂದ ಗಾಂಧಿ ಜಯಂತಿ ಆಚರಣೆ, ಗ್ರಾಮ ಪಂಚಾಯತ್ ಸದಸ್ಯರುಗಳಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಮರಾಟಿ ಸಮಾಜ ಸೇವಾ ಸಂಘ(ರಿ) ನರಿಮೊಗರು ವಠಾರದಲ್ಲಿ ಅ.2 ರಂದು ನಡೆಯಿತು.
ಗಾಂಧಿ ಜಯಂತಿ ಪ್ರಯುಕ್ತ ನರಿಮೊಗರು ಹಿಂದೂ ರುದ್ರ ಭೂಮಿಯಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ಸಂದರ್ಭದಲ್ಲಿ ನರಿಮೊಗರು ಮರಾಟಿ ಸಮಾಜಸೇವಾ ಸಂಘ ಇದರ ವ್ಯಾಪ್ತಿಯ ಚುನಾಯಿತ ಸ್ವಜಾತಿ ಗ್ರಾಮ ಪಂಚಾಯತ್ ಸದಸ್ಯರುಗಳನ್ನು ವೇದಿಕೆಯಲ್ಲಿ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ಅಲ್ಲದೇ ಸಂಘದ ವ್ಯಾಪ್ತಿಯ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಯಲ್ಲಿ ಪ್ರಥಮ ಶ್ರೇಣಿಯಲ್ಲಿ ಮತ್ತು ಹೆಚ್ಚಿನ ಅಂಕಗಳನ್ನು ಪಡೆದು ಉತ್ತೀರ್ಣರಾದ ಸ್ವಜಾತಿ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಸನ್ಮಾನ ಸ್ವೀಕರಿಸಿದ ಪಂಚಾಯತ್ ಸದಸ್ಯರುಗಳು ಸಂಘದ ಕಾರ್ಯ ಚಟುವಟಿಕೆಗಳನ್ನು ಮೆಚ್ಚಿ, ಗೌರವಿಸಿದಕ್ಕಾಗಿ ಸಂಘಕ್ಕೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಮಹಾಲಿಂಗ ನಾಯ್ಕ್, ಮಾಜಿ ಅಧ್ಯಕ್ಷರಾದ ಪರಮೇಶ್ವರ ನಾಯ್ಕ್ ಬಾವಿಕಟ್ಟೆ, ಕಾರ್ಯದರ್ಶಿಗಳಾದ ಸುಂದರ ನಾಯ್ಕ್, ಕೋಶಾಧಿಕಾರಿಯಾದ ದಿನೇಶ್ ಪುತ್ತಿಲ,ಮಾಜಿ ಕಾರ್ಯದರ್ಶಿ ಯೋಗಿಶ್ ಪಿ.ಶಾಂತಿಗೋಡು,ಗ್ರಾಮ ಪಂಚಾಯತ್ ಸದಸ್ಯರುಗಳಾದ ಪುಷ್ಪಾವತಿ ಮಾಯಾಂಗಳ, ಯಶೋಧ ಅಜಲಾಡಿ, ಪ್ರವೀಣ್ ನಾಯ್ಕ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಸುಂದರ ನಾಯ್ಕ್ ಬಿ.ಕೆ. ಧನ್ಯವಾದಗೈದರು, ಯೋಗೀಶ್ ಶಾಂತಿಗೋಡು ಕಾರ್ಯಕ್ರಮ ನಿರೂಪಿಸಿದರು.