ಪುತ್ತೂರು: ನೈಜ ರುಚಿ, ಗುಣಮಟ್ಟ ಸೇವೆಯ ‘ಅಕ್ಷಯ ಫಾರ್ಮ್ ಫ್ರೆಶ್ ಚಿಕನ್’ 7ನೇ ಶಾಖೆಯು ಬೆಳ್ಳಾರೆ ಮೇಗಿನಪೇಟೆಯ ಮಾಸ್ತಿಕಟ್ಟೆ ಜಂಕ್ಷನ್ ನಲ್ಲಿ ಅ.7 ರಂದು ಶುಭಾರಂಭಗೊಂಡಿತು.
ನೂತನ ಶಾಖೆಯ ಉದ್ಘಾಟನೆಯನ್ನು ಪೆರುವಾಜೆ ಶ್ರೀ ಜಲದುರ್ಗಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ ಪೆರುವಾಜೆ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ, ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ ಪನ್ನೆ, ಬೆಳ್ಳಾರೆ ಹೋಲಿಕ್ರಾಸ್ ಚರ್ಚ್ ಧರ್ಮಗುರುಗಳಾದ ಫಾ. ಪೌಲ್ ಡಿಸೋಜಾ, ನಿವೃತ್ತ ಕಸ್ಟಮ್ ಅಧೀಕ್ಷಕರಾದ ಆರ್. ಕೆ. ಭಟ್ ಕುರುಂಬುಡೇಲು, ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯರಾದ ವಿಠಲ ದಾಸ್ ಎನ್. ಎಸ್. ಡಿ. ಉದ್ಯಮಿ ನವೀನ್ ರೈ ತಂಬಿನಮಕ್ಕಿ, ಮಾಸ್ತಿಕಟ್ಟೆ ಶ್ರೀನಿಧಿ ಆಟೋ ವರ್ಕ್ಸ್ ಮಾಲಕರಾದ ಅಣ್ಣಿ ಪೂಜಾರಿ ಭಾಗವಹಿಸಿದ್ದರು.